ಹಿಂದಿನ ಕಾಲದಲ್ಲಿ 60 ವರ್ಷದ ನಂತರ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಯುವಕರು ಮತ್ತು ಚಿಕ್ಕ ಮಕ್ಕಳಲ್ಲೂ ಬಿಳಿ ಕೂದಲಿನ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಒತ್ತಡದ ಜೀವನ ಶೈಲಿ.
ಬಿಳಿ ಕೂದಲನ್ನು ಕಪ್ಪಾಗಿಸಲು ರಾಸಾಯನಿಕಯುಕ್ತ ಹೇರ್ ಡೈ ಗಳನ್ನು ಬಳಸುವುದರಿಂದ ಕೂದಲು ಮೃದುತ್ವವನ್ನು ಕಳೆದುಕೊಂಡು ಹಾನಿಗೊಳಗಾಗುತ್ತದೆ.
ನೈಸರ್ಗಿಕವಾಗಿ ಬಿಳಿಕೂದಲನ್ನು ಕಪ್ಪಾಗಿಸುವುದರಿಂದ ಕೂದಲ ಮೇಲಾಗುವ ಅಡ್ಡ ಪರಿಣಾಮಗಳನ್ನು ತಪ್ಪಿಸಬಹುದು. ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಇಲ್ಲಿದೆ ಸುಲಭ ವಿಧಾನ.
ವಿಧಾನ1: ಇಂಡಿಗೋ ಪೌಡರ್ ಅನ್ನು ಕೂದಲಿನ ಅಳತೆಗೆ ಅನುಗುಣವಾಗಿ ತೆಗೆದುಕೊಂಡು ನೀರಿನಲ್ಲಿ ಕಲಸಿ ತಕ್ಷಣವೇ ಕೂದಲಿಗೆ ಲೇಪಿಸಿಕೊಳ್ಳಬೇಕು. ಒಂದು ಗಂಟೆಯ ನಂತರ ಬರೀ ನೀರಿನಲ್ಲಿ ಕೂದಲನ್ನು ತೊಳೆಯಬೇಕು. 48 ಗಂಟೆಗಳ ಬಳಿಕ ಕೂದಲಿಗೆ ಎಣ್ಣೆಯನ್ನು ಲೇಪಿಸಿ ಶ್ಯಾಂಪೂವಿನಿಂದ ಕೂದಲನ್ನು ತೊಳೆಯಬೇಕು.
ವಿಧಾನ 2: 7ರಿಂದ8 ಟೇಬಲ್ ಸ್ಪೂನ್ ಮೆಹಂದಿ ಪುಡಿಯನ್ನು ತೆಗೆದುಕೊಂಡು ಬಿಸಿ ನೀರಿನ ಜೊತೆ ಕಲಿಸಿಡಬೇಕು ತಲೆಗೆ ಹಚ್ಚುವ ಮುನ್ನ ಅದಕ್ಕೆ 2 ಟೇಬಲ್ ಸ್ಪೂನ್ ಇಂಡಿಗೋ ಪೌಡರ್ ಅನ್ನು ಬೆರೆಸಿ ಈ ಪೇಸ್ಟನ್ನು ಲೇಪಿಸಿಕೊಂಡು 3 ಗಂಟೆಗಳ ನಂತರ ಬರೀ ನೀರಿನಿಂದ ಕೂದಲನ್ನು ತೊಳೆಯಬೇಕು. ಎರಡು ದಿನದ ಬಳಿಕ ಎಣ್ಣೆಯನ್ನು ಲೇಪಿಸಿ ಶಾಂಪೂವಿನಿಂದ ಕೂದಲನ್ನು ತೊಳೆದರೆ ನೈಸರ್ಗಿಕವಾಗಿ ಕೂದಲು ಕಪ್ಪಾಗುತ್ತದೆ.