
ಹೌದು, ಇದೀಗ ವೈರಲ್ ಆಗಿರೋ ವಿಡಿಯೋ ನೋಡಿದ್ರೆ, ಬಿಸಿಲೇ ಇರಲಿ….. ಏನೇ ಇರಲಿ ತಮ್ಮ ಮದುವೆಯ ಮೆರವಣಿಗೆ ಮಾತ್ರ ಭರ್ಜರಿಯಾಗಿ ಸಾಗಬೇಕು ಎಂದು ಅಂದುಕೊಂಡಂತಿದೆ.
ಬಿಸಿಲಿನಲ್ಲೇ ಮದುವೆಯ ಮೆರವಣಿಗೆಯೊಂದು ರಸ್ತೆಯಲ್ಲೇ ಸಾಗಿದೆ. ಬಿಸಿಲು ತಮ್ಮ ಮೈಗೆ ಸೋಕದಂತೆ ದೊಡ್ಡ ಪೆಂಡಾಲ್ ಅನ್ನು ಜನರು ಹಿಡಿದುಕೊಂಡಿದ್ದಾರೆ. ಅದರ ಮಧ್ಯೆ ನಿಂತು ಮೆರವಣಿಗೆಯಲ್ಲಿ ಸಾಗಿದ ಜನರು ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಲವರು ಮದುವೆಯ ಮೆರವಣಿಗೆಯನ್ನು ಕಂಡು ಹರ್ಷ ವ್ಯಕ್ತಪಡಿಸಿದ್ರೆ, ಇನ್ನೂ ಕೆಲವರು ಇಷ್ಟಪಟ್ಟಂತೆ ತೋರಿಲ್ಲ.
ಮುಂದಿನ ಐದು ದಿನಗಳಲ್ಲಿ ವಿದರ್ಭ, ರಾಜಸ್ಥಾನ ಮತ್ತು ಮಧ್ಯಪ್ರದೇಶ, ಉತ್ತರ ಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಒಳನಾಡಿನ ಒಡಿಶಾ, ಪಂಜಾಬ್, ಹರಿಯಾಣ ಹಾಗೂ ಚಂಡೀಗಢದಲ್ಲಿ ಉಷ್ಣ ಅಲೆಯ ಪರಿಸ್ಥಿತಿಗಳು ಮುಂದುವರಿಯಲಿವೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.