alex Certify ಬಿಡುಗಡೆಯಾಯ್ತು ಬಹು ನಿರೀಕ್ಷಿತ ‘RRR’ ಟ್ರೈಲರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡುಗಡೆಯಾಯ್ತು ಬಹು ನಿರೀಕ್ಷಿತ ‘RRR’ ಟ್ರೈಲರ್

‘ಬಾಹುಬಲಿ’ ಸಿನಿಮಾದಂತೆ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿರುವ ರಾಜಮೌಳಿ ನಿರ್ದೇಶನದ ‘RRR’ ಟ್ರೈಲರ್ ಬಿಡುಗಡೆ ಮಾಡಿದ್ದು, ತೆಲುಗು ಭಾಷೆಯಲ್ಲೇ 45 ನಿಮಿಷಗಳಲ್ಲಿ 1 ಮಿಲಿಯನ್ ವೀಕ್ಷಣೆ ಪಡೆದಿದೆ.

ಇನ್ನುಳಿದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲೂ ಈ ಟ್ರೈಲರ್ ಭರ್ಜರಿ ವೀವ್ಸ್ ಪಡೆದು ಮುನ್ನುಗ್ಗುತ್ತಿದೆ. ಜ್ಯೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ಸೇರಿದಂತೆ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಅಲಿಯಾ ಭಟ್, ಅಜಯ್ ದೇವಗನ್ ಎಲ್ಲಾ ಕಲಾವಿದರ ಪಾತ್ರಗಳನ್ನು ಈ ಟ್ರೈಲರ್ ನಲ್ಲಿ ತೋರಿಸಲಾಗಿದೆ.

MI-17V5 ಹೆಲಿಕಾಪ್ಟರ್ ದುರಂತ ಪ್ರಕರಣ; ಮದ್ರಾಸ್ ರೆಜಿಮೆಂಟ್ ಸೆಂಟರ್ ನಲ್ಲಿ ಹುತಾತ್ಮ ವೀರಯೋಧರಿಗೆ ಗೌರವ ನಮನ

ಡಿ.ವಿ.ವಿ. ದಾನಯ್ಯ ತಮ್ಮ ಡಿ.ವಿ.ವಿ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ನಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ರಾಯ್ ಸ್ಟೀವನ್ ಸನ್, ಒಲಿವಿಯಾ ಮೋರಿಸ್, ಶ್ರೀಯಾ ಸರನ್, ಅರುಣ್ ಸಾಗರ್ ಸೇರಿದಂತೆ ಮೊದಲಾದ ಕಲಾವಿದರು ತೆರೆಹಂಚಿಕೊಂಡಿದ್ದಾರೆ.

ಇಂದು ಬಿಡುಗಡೆಯಾಗಿರುವ ಈ ಟ್ರೈಲರ್ ನಲ್ಲಿ ಜ್ಯೂ. ಎನ್ಟಿಆರ್ ಹಾಗೂ ರಾಮ್ ಚರಣ್ ಡೈಲಾಗ್ ಗಳು ಅಭಿಮಾನಿಗಳಲ್ಲಿ ಇನ್ನಷ್ಟು ನಿರೀಕ್ಷೆ ಮೂಡಿಸುವಂತೆ ಮಾಡಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...