alex Certify ಬಿಡದೇ ಕಾಡುವ ʼನಿದ್ರಾಹೀನತೆʼ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡದೇ ಕಾಡುವ ʼನಿದ್ರಾಹೀನತೆʼ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ

ಉತ್ತಮ ಆರೋಗ್ಯಕ್ಕೆ ಒಳ್ಳೆಯ ಆಹಾರ, ಸ್ವಚ್ಛತೆ ಮತ್ತು ಸರಿಯಾದ ಜೀವನಶೈಲಿ ಇವೆಲ್ಲವೂ ಅತ್ಯಗತ್ಯ. ಅದೇ ರೀತಿಯಲ್ಲಿ ಸರಿಯಾದ ನಿದ್ದೆ ಕೂಡ ಆರೋಗ್ಯಕ್ಕೆ ಬಹಳ ಅವಶ್ಯಕ. ಕೆಲವರಿಗೆ ರಾತ್ರಿ ಸರಿಯಾಗಿ ನಿದ್ದೆಯೇ ಬರುವುದಿಲ್ಲ. ಆಗಾಗ ಎಚ್ಚರವಾಗುವುದು, ಎಷ್ಟು ಬಾರಿ ಮಗ್ಗುಲು ಬದಲಾಯಿಸಿದ್ರೂ ಕಿರಿಕಿರಿ ಹೀಗೆ ಹಲವು ಸಮಸ್ಯೆಗಳು ಕಾಡುತ್ತವೆ.

ರಾತ್ರಿಯಲ್ಲಿ ನಿದ್ರೆಯ ಕೊರತೆಯಿಂದಾಗಿ ದಿನವಿಡೀ ಆಯಾಸದ ಅನುಭವವಾಗುತ್ತದೆ. ಕೆಲವೊಂದು ಕಾಯಿಲೆಗಳು ಸಹ ನಮ್ಮನ್ನು ಆವರಿಸಿಕೊಳ್ಳುತ್ತವೆ. ಕೆಲವೊಮ್ಮೆ ನಮ್ಮ ತಪ್ಪಾದ ಜೀವನ ಶೈಲಿಯೇ ನಿದ್ರಾಹೀನತೆಗೆ ಕಾರಣವಾಗುತ್ತದೆ. ಇದನ್ನು ಸರಿಪಡಿಸಿಕೊಂಡರೆ ನಿದ್ರಾಹೀನತೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ರಾತ್ರಿ ಚೆನ್ನಾಗಿ ನಿದ್ದೆ ಬರಬೇಕೆಂದರೆ ಬೆಳಗ್ಗೆ ಎಳೆ ಬಿಸಿಲಿನಲ್ಲಿ ಸ್ವಲ್ಪ ಸಮಯ ಕಳೆಯಿರಿ. ಇದರಿಂದ ದೇಹದಲ್ಲಿ ವಿಭಿನ್ನ ರೀತಿಯ ಶಕ್ತಿಯು ಹರಡುತ್ತದೆ ಮತ್ತು ಮೆದುಳಿನಲ್ಲಿ ಸಿರೊಟೋನಿನ್ ಮಟ್ಟವನ್ನು ಸರಿಪಡಿಸುತ್ತದೆ.

ತುಪ್ಪವು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಎಂಬುದು  ನಮಗೆಲ್ಲರಿಗೂ ತಿಳಿದಿದೆ. ರಾತ್ರಿ ಬಿಸಿ ತುಪ್ಪದಿಂದ ಪಾದಗಳನ್ನು ಮಸಾಜ್ ಮಾಡುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ.

ಪ್ರತಿನಿತ್ಯ ಪ್ರೋಟೀನ್ ಭರಿತ ಆಹಾರವನ್ನು ಸೇವಿಸಿ. ಇದು ನಿದ್ರಾಹೀನತೆಯ ಸಮಸ್ಯೆಯನ್ನು ಸುಧಾರಿಸುತ್ತದೆ. ಇದರಿಂದ ಹಾರ್ಮೋನ್ ಸಮತೋಲನವನ್ನು ಕಾಪಾಡಿಕೊಳ್ಳಬಹುದು.

ಪ್ರತಿದಿನ ಬೆಳಗ್ಗೆ 4 ರಿಂದ 5 ನೆನೆಸಿದ ಬಾದಾಮಿ ತಿನ್ನಿ.ಇದರಿಂದ ದೇಹದಲ್ಲಿನ ಸತು, ಮೆಗ್ನೀಸಿಯಮ್‌ನಂತಹ ಅಗತ್ಯವಾದ ಖನಿಜಗಳ ಕೊರತೆಯನ್ನು ನೀಗಿಸಬಹುದು. ಸಾಧ್ಯವಾದರೆ ಪ್ರತಿದಿನ ಸಂಜೆ ಸಿಹಿ ಗೆಣಸನ್ನು ಸೇವಿಸಿ, ಅದು ದೇಹದಲ್ಲಿ ಮೆಲಟೋನಿನ್ ಮಟ್ಟವನ್ನು ಸರಿಯಾಗಿ ಇಡುತ್ತದೆ.

ಒಣಗಿದ ಅಂಜೂರದ ಹಣ್ಣುಗಳು ನಿದ್ರೆಯ ಸಮಸ್ಯೆಗೆ ಬಹಳ ಪರಿಣಾಮಕಾರಿ. ನೀವು ಚಹಾ ಮತ್ತು ಕಾಫಿಯನ್ನು ಇಷ್ಟಪಡುತ್ತಿದ್ದರೆ ಈ ಅಭ್ಯಾಸವನ್ನು ಬಿಟ್ಟುಬಿಡಿ. ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ. ರಾತ್ರಿ ಮಲಗುವ ಸಮಯಕ್ಕೂ 3-4 ಗಂಟೆಗಳ ಮೊದಲೇ ಊಟ ಮಾಡಿ. ಇದರಿಂದಲೂ ನಿದ್ರಾಹೀನತೆಯ ಸಮಸ್ಯೆ ದೂರವಾಗುತ್ತದೆ.

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...