
ರಾಜ್ಯದಲ್ಲಿ ಬಿಜೆಪಿ 40 ರಿಂದ 104 ಸ್ಥಾನ ಪಡೆಯಲು ಕುಮಾರಸ್ವಾಮಿಯೇ ಕಾರಣ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕುಮಾರಸ್ವಾಮಿಯವರ ಫೋಟೋ ಹಾಕಿಕೊಳ್ಳಬೇಕು ಎಂದು ಜೆಡಿಎಸ್ ಮುಖಂಡ ಎಚ್.ಡಿ. ರೇವಣ್ಣ ಹೇಳಿದ್ದಾರೆ.
ಬಿಆರ್ ಪ್ರಾಜೆಕ್ಟ್ ಬಳಿ ‘ಜನತಾ ಜಲಧಾರೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕುಮಾರಸ್ವಾಮಿಯವರು ಧರ್ಮರಾಯನಿದ್ದಂತೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಯಾರು ಏನು ಕೇಳಿದರೂ ಬರೆದುಕೊಡುತ್ತಿದ್ದರು. ಅವರಿಂದ ಎರಡೂ ರಾಷ್ಟ್ರೀಯ ಪಕ್ಷಗಳ ಮುಖಂಡರು ಲಾಭ ಪಡೆದುಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಬೇಸಿಗೆ ದಾಹ ತಣಿಸೋ ಮಾವಿನ ಹಣ್ಣಿನ ಕುಲ್ಫಿ
ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಬುನಾದಿ ಹಾಕಿಕೊಟ್ಟವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಎಂದು ಹೇಳಿದ ರೇವಣ್ಣ, ಆದರೆ ಇತರೆ ಸರ್ಕಾರ ಹಾಗೂ ಸಚಿವರುಗಳು ಯಾವುದೇ ಕೆಲಸ ಮಾಡಲಿಲ್ಲ ಎಂದು ಆರೋಪಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಬಹುಮತ ಪಡೆದು ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಖಚಿತ. ಕೋಡಿಮಠದ ಸ್ವಾಮಿಗಳು ಸಹ ಇದೇ ಭವಿಷ್ಯವನ್ನು ನುಡಿದಿದ್ದಾರೆ ಎಂದು ಎಚ್.ಡಿ. ರೇವಣ್ಣ ಹೇಳಿದರು.