ದೇಹದ ಮೇಲಿರುವ ಅನಗತ್ಯ ಕೂದಲನ್ನು ತೆಗೆದು ಹಾಕಲು ಹುಡುಗಿಯರು ವ್ಯಾಕ್ಸಿಂಗ್ ಮೊರೆ ಹೋಗ್ತಾರೆ. ಈ ಪ್ರಕ್ರಿಯೆಯಲ್ಲಿ ನೋವು ಹೆಚ್ಚಾಗುತ್ತದೆ. ನೀವೂ ಬಿಕಿನಿ ವ್ಯಾಕ್ಸ್ ಮಾಡಿಸಲು ಮುಂದಾಗಿದ್ದರೆ ನಿಮಗೊಂದು ಸಲಹೆಯಿದೆ. ಬಿಕಿನಿ ವ್ಯಾಕ್ಸ್ ಮೊದಲು ಕೆಲ ವಿಷ್ಯಗಳನ್ನು ನೆನಪಿಡಿ.
ವ್ಯಾಕ್ಸ್ ಮಾಡಲು ಹೋದಾಗ ಚರ್ಮದ ನೋವು ಹೆಚ್ಚಿರುತ್ತದೆ. ನೋವನ್ನು ಕಡಿಮೆ ಮಾಡಲು ನೀವು ನಂಬಿಂಗ್ ಕ್ರೀಮ್ ಬಳಸಿ.
ವ್ಯಾಕ್ಸಿಂಗ್ ವೇಳೆ ಕಾಡುವ ನೋವನ್ನು ತಡೆದುಕೊಳ್ಳುವ ಶಕ್ತಿ ನಿಮಗಿಲ್ಲ ಎಂದಾದ್ರೆ ವ್ಯಾಕ್ಸಿಂಗ್ ಮೊದಲು ನೀವು ಅಡ್ವಿಲ್ ಟ್ಯಾಬ್ಲೆಟ್‌ಗಳನ್ನು ತೆಗೆದುಕೊಳ್ಳಬಹುದು. ಇದು ನೋವನ್ನು ಕಡಿಮೆ ಮಾಡುತ್ತದೆ.
ಮುಟ್ಟಿನ ಸಮಯದಲ್ಲಿ ಬಿಕಿನಿ ವ್ಯಾಕ್ಸ್ ಮಾಡುವ ಸಹವಾಸಕ್ಕೆ ಹೋಗಬೇಡಿ. ಈ ವೇಳೆ ನಿಮ್ಮ ಚರ್ಮ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಎಚ್ಚರಿಕೆ ವಹಿಸಬೇಕು.
ವ್ಯಾಕ್ಸಿಂಗ್ ನಂತ್ರ ಉರಿಯಾಗ್ತಿದ್ದರೆ ಐಸ್ ಬಳಸಬಹುದು. ಇದು ಉರಿಯನ್ನು ಕಡಿಮೆ ಮಾಡುತ್ತದೆ.
ಬಿಕಿನಿ ವ್ಯಾಕ್ಸ್ ವೇಳೆ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸಿ. ಪಾರ್ಲರ್ ನಲ್ಲಿ ಬೇರೆಯವರಿಗೆ ಬಳಸಿದ ವ್ಯಾಕ್ಸ್ ನಿಮಗೆ ಬಳಸದಂತೆ ನೋಡಿಕೊಳ್ಳಿ.