ಹೈದರಾಬಾದ್ನ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ಗೆ ಬಿಎಂಡಬ್ಲು ಕಾರು ಡಿಕ್ಕಿ ಹೊಡೆದ ಘಟನೆಯು ವರದಿಯಾಗಿದೆ. ಮುಶೀರಾಬಾದ್ ಇನ್ಸ್ಪೆಕ್ಟರ್ ಇ. ಜಹಂಗೀರ್ ಟ್ಯಾಂಕ್ ಬಂಡ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಿಕಂದರಾಬಾದ್ನ ರಾಣಿ ಗುಂಜ್ನಿಂದ ಬರುತ್ತಿದ್ದ ಬಿಎಂಡಬ್ಲು ಕಾರು ಇನ್ಸ್ಪೆಕ್ಟರ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಇನ್ಸ್ಪೆಕ್ಟರ್ ಜಹಂಗೀರ್ ಗಾಯಗೊಂಡಿದ್ದಾರೆ.
ಇನ್ಸ್ಪೆಕ್ಟರ್ಗೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ಜಹಂಗೀರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಜಹಾಂಗೀರ್ ತಮ್ಮ ಕಾರಿನಿಂದ ಇಳಿದು ಟ್ಯಾಂಕ್ ಬಂಡ್ ರಸ್ತೆಯಲ್ಲಿದ್ದ ಗುಂಪು ಚದುರಿಸಲು ನಡೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಈ ಅಪಘಾತ ಸಂಭವಿಸಿದೆ.
ಕಾರು ಚಲಾಯಿಸುತ್ತಿದ್ದವನನ್ನು ಮಿರ್ ಒಸಾಮನ್ ಅಲಿ ಖಾನ್ ಎಂದು ಗುರುತಿಸಲಾಗಿದೆ. ಈತ ಹೈದರಾಬಾದ್ನ ಆಸಿಫ್ ನಗರದಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳ ಡೀಲರ್ ಆಗಿದ್ದಾನೆ. ಪೊಲೀಸ್ ಬರುತ್ತಿದ್ದುದನ್ನು ನಾನು ಗಮನಿಸಿರಲಿಲ್ಲ ಎಂದು ಮಿರ್ ಒಸಾಮನ್ ಹೇಳಿದ್ದಾನೆ.
ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದು ಕಾರು ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ 337 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.