ಫೆಬ್ರವರಿ ತಿಂಗಳು ಪ್ರೇಮಿಗಳಿಗೆ ಅತ್ಯಂತ ಸ್ಪೆಷಲ್ ಅಂತಾನೇ ಕರೆಸಿಕೊಳ್ಳತ್ತೆ. ಇಡೀ ವಿಶ್ವದಲ್ಲೆ ಫೆಬ್ರವರಿ 14ನೇ ತಾರೀಖಿನಂದು ಪ್ರೇಮಿಗಳು ಈ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಅದ್ರಲ್ಲೂ ಕಾಲೇಜಿನಲ್ಲಿರುವ ಹದಿಹರೆಯದವರು ಈ ದಿನವನ್ನು ಆಚರಿಸೋದಕ್ಕೆ ಕಾತರರಾಗಿರುತ್ತಾರೆ. ಆದರೆ ಪ್ರೇಮಿಗಳ ದಿನಾಚರಣೆ, ಅದು ಕಾಲೇಜು ಕ್ಯಾಂಪಸ್ ನಲ್ಲಿ ಸಾಧ್ಯವೇ ಇಲ್ಲದ ಮಾತು.
ಆದರೆ ಬೆಂಗಳೂರಿನ ಬಿಎಂಎಸ್ ಕಾಲೇಜಿನ ಕ್ಯಾಂಪಸ್ ನಲ್ಲಿ ನೆನ್ನೆ ಪ್ರೇಮಿಗಳ ದಿನಾಚರಣೆ ನಡೆದಿದೆ. ಬೆಂಗಳೂರಿನ ಬಸವನಗುಡಿಯಲ್ಲಿರುವ BMS ಮಹಿಳಾ ಕಾಲೇಜಿನಲ್ಲಿ ಅದ್ಧೂರಿಯಾಗಿ ವ್ಯಾಲೆಂಟೈನ್ಸ್ ಡೇ ಸಂಭ್ರಮಾಚರಣೆ ನಡೆದಿದೆ. ಕಾಲೇಜಿಗೆ ರಜೆ ಇದ್ದರು, ನೆನ್ನೆ ತಡರಾತ್ರಿಯವರೆಗೆ ಕಾಲೇಜು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದ್ದಾರೆ.
9 ತಿಂಗಳಲ್ಲಿ ಬರೋಬ್ಬರಿ 80 ಕೋಟಿ ರೂಪಾಯಿ ದಂಡ ಸಂಗ್ರಹಿಸಿದ ಪಶ್ಚಿಮ ರೈಲ್ವೆ ಇಲಾಖೆ…..!
ಪ್ರೇಮಿಗಳ ದಿನಾಚರಣೆಗೆ ಕಾಲೇಜು ಆಡಳಿತ ಮಂಡಳಿಯೆ ವೇದಿಕೆ ಕಲ್ಪಿಸಿಕೊಟ್ಟಿದೆ. ಕಾಲೇಜಿನಲ್ಲಿ ಜೋರು ಸದ್ದು ಮಾಡುವ ಡಿಜೆ ಹಾಕಿ ತಡರಾತ್ರಿಯವರೆಗೂ ಆಚರಣೆ ನಡೆಸಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪ್ರೇಮಿಗಳ ದಿನಾಚರಣೆ ಸಂಭ್ರಮಾಚರಣೆಯ ನಡುವೆ, ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ. ಮಹಿಳಾ ಕಾಲೇಜಿಗೆ ಪುರುಷ ವಿದ್ಯಾರ್ಥಿಗಳಿಗೂ ಎಂಟ್ರಿ ನೀಡಿದ್ದಾರೆಂದು ಕಾಲೇಜಿನ ಅಕ್ಕಪಕ್ಕ ವಾಸಿಸುವ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ ಈ ಎಲ್ಲಾ ಆರೋಪಗಳನ್ನ ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಅಲ್ಲಗಳೆದಿದ್ದಾರೆ. ನಿನ್ನೆ ಈವನಿಂಗ್ ಕಾಲೇಜಿನ ಮೊದಲನೇ ಪದವಿ ವಿದ್ಯಾರ್ಥಿಗಳ ಇನಾಗರೇಷನ್ ಕಾರ್ಯಕ್ರಮ ನಡೆದಿದೆ. ಅದು ಫೆಬ್ರವರಿ ಹದಿನಾಲ್ಕರಂದೇ ನಡೆದಿರುವುದರಿಂದ ಈ ಗೊಂದಲ ಉಂಟಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
https://youtu.be/HRZDjIwhr1I