ನೀವು ಬಾಳೆಹಣ್ಣು ಸೇವನೆಯೊಂದಿಗೆ ಹಾಲು ಕುಡಿಯುವ ಅಭ್ಯಾಸ ಇಟ್ಟುಕೊಂಡಿದ್ದೀರಾ, ಹಾಗಾದರೆ ಕೆಲವೇ ದಿನಗಳಲ್ಲಿ ನಿಮ್ಮ ದೇಹ ತೂಕ ಹೆಚ್ಚುವುದು ನಿಶ್ಚಿತ.
ಹೌದು, ಯಾವುದೇ ವ್ಯಾಯಾಮ ಮಾಡದೆಯೂ ನೀವು ಇದನ್ನು ಜೊತೆಯಾಗಿ ಸೇವಿಸುತ್ತಾ ಬಂದರೆ ಕೆಲವೇ ದಿನಗಳಲ್ಲಿ ನಿಮ್ಮ ದೇಹದಲ್ಲಿ ಫ್ಯಾಟ್ ಹೆಚ್ಚಿ ತೂಕ ಏರುವ ಸಾಧ್ಯತೆ ಇದೆ.
ಬಾಡಿ ಬಿಲ್ಡಿಂಗ್ ಮಾಡುವವರಿಗೆ ಇದು ಹೇಳಿ ಮಾಡಿಸಿದ ಫುಡ್. ಅಸ್ತಮಾ ಇರುವವರು ಕಡ್ಡಾಯವಾಗಿ ಇದನ್ನು ಸೇವಿಸಬಾರದು. ರಾತ್ರಿ ಊಟ ಮಾಡಿದ ಬಳಿಕ ಹಾಲು ಕುಡಿದು ಮಲಗುವ ಬದಲು ಬಾಳೆಹಣ್ಣು ಸೇವಿಸಿ ಮಲಗಿ. ಇದರಿಂದ ಉತ್ತಮ ನಿದ್ರೆ ಬರುವುದು ಮಾತ್ರವಲ್ಲ, ಹಸಿವು ಕೂಡಾ ಆಗುವುದಿಲ್ಲ.
ಬಾಳೆಹಣ್ಣಿನ ಮಿಲ್ಕ್ ಶೇಕ್ ಅನ್ನು ಸಾಧ್ಯವಾದಷ್ಟು ದೂರವಿಡಿ. ಇದು ನಿಮ್ಮ ಜೀರ್ಣಕ್ರಿಯೆಯನ್ನು ಮತ್ತಷ್ಟು ನಿಧಾನಿಸುತ್ತದೆ. ಇವೆರಡನ್ನು ಪ್ರತ್ಯೇಕವಾಗಿ ತಿನ್ನುವುದಾದರೆ ಎರಡರ ಮಧ್ಯೆ ಕನಿಷ್ಠ 20 ನಿಮಿಷ ಅಂತರವಿರಲಿ. ಖಾಲಿ ಹೊಟ್ಟೆಗೆ ಇವೆರಡನ್ನು ಸೇವಿಸುವುದು ಕೂಡಾ ಒಳ್ಳೆಯದಲ್ಲ.