ಬೇಕಾಗುವ ಸಾಮಾಗ್ರಿಗಳು:
ಏಲಕ್ಕಿ ಬಾಳೆಹಣ್ಣು – 15, ಬೆಲ್ಲ – 100 ಗ್ರಾಂ, ತೆಂಗಿನಕಾಯಿ – 1, ಎಳ್ಳು – ಸ್ವಲ್ಪ.
ಮಾಡುವ ವಿಧಾನ:
ಹಣ್ಣಾದ ಬಾಳೆಹಣ್ಣಿನ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಳ್ಳಬೇಕು. ಬಳಿಕ 100 ಗ್ರಾಂ ಬೆಲ್ಲವನ್ನು ತುರಿದು ಹಾಕಿ, ಸಿಹಿಗನುಸಾರವಾಗಿ ಬೆಲ್ಲ ಸೇರಿಸಿ. ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 1 ಹಸಿ ತೆಂಗಿನಕಾಯಿಯನ್ನು ತುರಿದು ಸ್ವಲ್ಪ ರುಬ್ಬಿಕೊಂಡು ಕಾಯಿ ಹಾಲು ತೆಗೆಯಿರಿ.
ಬಾಳೆಹಣ್ಣು, ಬೆಲ್ಲ ಮಿಕ್ಸ್ ಮಾಡಿಟ್ಟ ಪಾಕಕ್ಕೆ ಕಾಯಿಹಾಲು ಸೇರಿಸಿ, ನಂತರ ಹುರಿದ ಕಪ್ಪು ಎಳ್ಳು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ಶ್ಯಾವಿಗೆ ಅಥವಾ ದೋಸೆ ಜೊತೆ ಸವಿಯಲು ಬಾಳೆಹಣ್ಣಿನ ರಸಾಯನ ರೆಡಿ.