alex Certify ಬಾಳಿಗೆ ಕೊಳ್ಳಿಯಿಟ್ಟ ಮಾಜಿ ಗೆಳತಿ..! ನಡುರಸ್ತೆಯಲ್ಲಿ ಬೆಂಕಿ ಹಚ್ಚಿ ಕೊಂದ ಪಾಪಿಗಳು ಅಂದರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಳಿಗೆ ಕೊಳ್ಳಿಯಿಟ್ಟ ಮಾಜಿ ಗೆಳತಿ..! ನಡುರಸ್ತೆಯಲ್ಲಿ ಬೆಂಕಿ ಹಚ್ಚಿ ಕೊಂದ ಪಾಪಿಗಳು ಅಂದರ್​

31 ವರ್ಷದ ವ್ಯಕ್ತಿಯನ್ನು ಆತನ ಮಾಜಿ ಗೆಳತಿ ಹಾಗೂ ಆಕೆಯ ಕುಟುಂಬಸ್ಥರು ಸೇರಿ ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆಯು ನಾಸಿಕ್​ನಲ್ಲಿ ನಡೆದಿದೆ. ಸುಟ್ಟ ಗಾಯಗಳಿಂದ ಬಳಲುತ್ತಿದ್ದ ವ್ಯಕ್ತಿಯು ಭಾನುವಾರ ಮೃತಪಟ್ಟಿದ್ದಾರೆ.

ಈ ಪ್ರಕರಣ ಸಂಬಂಧ 23 ವರ್ಷದ ಕಲ್ಯಾಣಿ ಸೋನಾವಾನೆ ಹಾಗೂ ಆಕೆಯ ನಾಲ್ವರು ಕುಟುಂಬಸ್ಥರನ್ನು ಪೊಲೀಸರು ಬಂಧಿಸಿದ್ದು, ಇವರ ವಿರುದ್ಧ ಕೊಲೆ ಆರೋಪದ ಪ್ರಕರಣವನ್ನು ದಾಖಲಿಸಿದ್ದಾರೆ.

ಕಲ್ಯಾಣಿ ತಾಯಿ ನಿರ್ಮಲಾ, ತಂದೆ ಗೋಕುಲ್​ ಹಾಗೂ ಇಬ್ಬರು ಸಹೋದರರಾದ ಹೇಮಂತ್​ ಹಾಗೂ ಪ್ರಸಾದ್​ರನ್ನು ಪೊಲೀಸರು ಬಂಧಿಸಿದ್ದಾರೆ.

ನಾಸಿಕ್‌ನ ದೇವ್ಲಾ ತಾಲೂಕಿನ ಲೋಹನೇರ್ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಸುಟ್ಟ ಗಾಯಗಳಿಂದ ಬಳಲುತ್ತಿದ್ದ ವ್ಯಕ್ತಿಯು ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ವೃತ್ತಿಯಲ್ಲಿ ಪ್ಲಂಬರ್​ ಆಗಿರುವ ಮೃತ ವ್ಯಕ್ತಿಯು ಮಾರುಕಟ್ಟೆಯಲ್ಲಿ ನಿಂತಿದ್ದ ವೇಳೆಯಲ್ಲಿ ಕಲ್ಯಾಣಿ ಕುಟುಂಬಸ್ಥರು ಅಲ್ಲಿಗೆ ಆಗಮಿಸಿದ್ದರು. ಕಲ್ಯಾಣಿಯ ತಂದೆ ಹಾಗೂ ಸಹೋದರರು ಕಬ್ಬಿಣದ ರಾಡ್​​ಗಳಿಂದ ವ್ಯಕ್ತಿಗೆ ಥಳಿಸಲು ಆರಂಭಿಸಿದರು.

ಮೂವರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಬಳಿಕ ಕಲ್ಯಾಣಿ ತಾಯಿ ಆತನ ಮೈಮೇಲೆ ಸೀಮೆ ಎಣ್ಣೆ ಸುರಿದರೆ ಕಲ್ಯಾಣಿ ಬೆಂಕಿ ಹಚ್ಚಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...