alex Certify ಬಾಲಕಿಯ ಹಾಡಿಗೆ ತಕ್ಕಂತೆ ರಾಗ ಹಾಕಿದ ಶ್ವಾನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕಿಯ ಹಾಡಿಗೆ ತಕ್ಕಂತೆ ರಾಗ ಹಾಕಿದ ಶ್ವಾನ….!

Video of little girl performing with her pet doggo is the cutest thing on the internet today. (Image courtesy: Instagram)ನೀವು ಮುದ್ದಾದ ಪ್ರಾಣಿಗಳ ವಿಡಿಯೋಗಳನ್ನು ನೋಡುವುದನ್ನು ಇಷ್ಟಪಡುತ್ತಿದ್ರೆ, ಖಂಡಿತವಾಗಿಯೂ ಇದನ್ನು ಮಿಸ್ ಮಾಡ್ಕೋಬೇಡಿ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಮುದ್ದಾದ ಪುಟ್ಟ ಬಾಲಕಿಯೊಬ್ಬಳು ತನ್ನ ಮುದ್ದಿನ ನಾಯಿಯೊಂದಿಗೆ ಪ್ರದರ್ಶನ ನೀಡಿದ್ದಾಳೆ.

ಇಬ್ಬರು ಆತ್ಮೀಯ ಸ್ನೇಹಿತರು ತಮ್ಮ ಹೃದಯದಿಂದ ಹಾಡು ಹಾಡಿದ್ದಾರೆ. ಈ ವಿಡಿಯೋವನ್ನು ನೋಡುವುದೇ ಮನಸ್ಸಿಗಾನಂದ. ಈ ವಿಡಿಯೋವನ್ನು ಸ್ಟೈಲಿಶ್ ಪಾವ್ಸ್‌ ಇನ್ಸ್ಟಾಗ್ರಾಂ ಪುಟದಿಂದ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು 1 ದಶಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುಟ್ಟ ಬಾಲಕಿ ಮೈಕ್‌ ಹಿಡಿದುಕೊಂಡು ಹಾಡುತ್ತಿದ್ದರೆ, ಆಕೆಯ ಮುದ್ದಿನ ಶ್ವಾನ ಬಾಲಕಿಯ ಪಕ್ಕದಲ್ಲಿಯೇ ಕುಳಿತು ರಾಗಗಳಿಗೆ ಊಳಿಡುತ್ತಿದೆ. ಹುಡುಗಿ ಸ್ಕರ್ಟ್ ಮತ್ತು ಟೀ ಶರ್ಟ್ ಧರಿಸಿದ್ದಾಳೆ. ಮುದ್ದಾದ ನಾಯಿಯು ಅದರ ಕುತ್ತಿಗೆಗೆ ಸ್ಕಾರ್ಫ್ ಅನ್ನು ಹೊಂದಿದೆ.

ಬಾಲಕಿ ಹಾಡುವುದನ್ನು ಮುಂದುವರೆಸುತ್ತಿದ್ದಂತೆ ನಾಯಿ ಕೂಡ ನಿರಂತರವಾಗಿ ಊಳಿಟ್ಟಿದೆ. ಈ ಸಂಗೀತ ಕಚೇರಿಯ ವಿಡಿಯೋವನ್ನು ನೆಟ್ಟಿಗರು ಇಷ್ಟಪಟ್ಟಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಹೃದಯದ ಎಮೋಜಿಯನ್ನು ತುಂಬಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...