alex Certify ಬಾಲಕಿಯನ್ನು ರಕ್ಷಿಸಲು ತನ್ನ ಪ್ರಾಣ ಪಣಕ್ಕಿಟ್ಟ ಮಹಿಳಾ ಪೊಲೀಸ್ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕಿಯನ್ನು ರಕ್ಷಿಸಲು ತನ್ನ ಪ್ರಾಣ ಪಣಕ್ಕಿಟ್ಟ ಮಹಿಳಾ ಪೊಲೀಸ್ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ

According to a report on The Sun, the cop in the video is Annette Goodyear, who is employed with the North East Police Department. ಶಾಲಾ ವಿದ್ಯಾರ್ಥಿನಿಯನ್ನು ರಕ್ಷಿಸಲು ಮಹಿಳಾ ಪೊಲೀಸ್ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿರೋ ಘಟನೆ ಅಮೆರಿಕಾದ ಮೇರಿಲ್ಯಾಂಡ್‌ನಲ್ಲಿ ನಡೆದಿದೆ.

ನಾರ್ತ್ ಈಸ್ಟ್ ಮಿಡಲ್ ಸ್ಕೂಲ್ ಬಳಿಯ ರಸ್ತೆಯನ್ನು ದಾಟುತ್ತಿದ್ದ ಬಾಲಕಿಯನ್ನು ವೇಗವಾಗಿ ಬಂದ ಕಾರ್ ನಿಂದ ರಕ್ಷಿಸಲಾಗಿದೆ. ವಾಹನವು ಬಾಲಕಿಯ ಕಡೆಗೆ ಬರುತ್ತಿದ್ದಂತೆ, ಎಚ್ಚೆತ್ತ  ಮಹಿಳಾ ಪೊಲೀಸ್ ಆಕೆಯನ್ನು ಎಳೆದು ಬಿದ್ದಿದ್ದಾರೆ. ಇಡೀ ಘಟನೆ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ.

ವರದಿಯ ಪ್ರಕಾರ, ವಿಡಿಯೋದಲ್ಲಿರುವ ಪೊಲೀಸ್ ಆನೆಟ್ ಗುಡ್‌ಇಯರ್ ಅವರು ಈಶಾನ್ಯ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ. ಮೂಲಗಳ ಪ್ರಕಾರ, ಆನೆಟ್ 14 ವರ್ಷಗಳಿಂದ ಕ್ರಾಸಿಂಗ್ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ವಿಡಿಯೋದಲ್ಲಿ, ಗುಡ್‌ಇಯರ್ ಕಾರನ್ನು ನಿಲ್ಲಿಸಲು ತನ್ನ ಕೈ ಮೂಲಕ ಸನ್ನೆ ಮಾಡುತ್ತಿರುವುದನ್ನು ನೋಡಬಹುದು. ಆದರೆ ಬಹಳ ವೇಗವಾಗಿದ್ದ ಕಾರು ನಿಲ್ಲಿಸದೆ ಸೀದಾ ಮುಂದೆ ಬಂದಿದೆ (ಚಾಲಕನಿಗೆ ಬ್ರೇಕ್ ಒತ್ತಲು ಹಿಡಿತ ಸಿಗಲಿಲ್ಲವೆ ಎಂಬ ಬಗ್ಗೆ ಇನ್ನೂ ಗೊತ್ತಾಗಿಲ್ಲ). ಕಾರು ಬಾಲಕಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಮಹಿಳಾ ಪೊಲೀಸ್ ಕೂಡಲೇ ಆಕೆಯನ್ನು ಎಳೆದಿದ್ದಾರೆ. ಇದರಿಂದ ಅವರು ರಸ್ತೆಯಲ್ಲೇ ಬಿದ್ದಿದ್ದು, ಸಮೀಪದಲ್ಲಿದ್ದ ಜನರು ಅವರ ಸಹಾಯಕ್ಕೆ ಧಾವಿಸಿದ್ದಾರೆ.

ಪೊಲೀಸ್ ಆನೆಟ್ ಗುಡ್‌ಇಯರ್ ಅವರನ್ನು ಹೀರೋ ಎಂದು ನೆಟ್ಟಿಗರು ಕರೆದಿದ್ದಾರೆ ಆಕೆಯ ಶೌರ್ಯವನ್ನು ಜನರು ಹಾಡಿ ಹೊಗಳಿದ್ದಾರೆ.

— Gov. Wes Moore (@iamwesmoore) February 5, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...