
ಆನಂದ್ ಮಹೀಂದ್ರಾ ಅವರು ಹಂಚಿಕೊಂಡಿರುವ ವಿಡಿಯೋ ಟ್ವಿಟ್ಟರ್ ನಲ್ಲಿ ಭಾರಿ ಸದ್ದು ಮಾಡಿದೆ. ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಕೂಡ ಸಹಯೋಗ ಮತ್ತು ಟೀಮ್ವರ್ಕ್ನ ಸದ್ಗುಣಗಳನ್ನು ತಿಳಿಸಲು ಇದಕ್ಕಿಂತ ಉತ್ತಮ ವಿಡಿಯೋವನ್ನು ಹೊಂದಿಲ್ಲ ಎಂದು ವಿಡಿಯೋ ಸಹಿತ ಟ್ವೀಟ್ ಮಾಡಿದ್ದಾರೆ.
ಬಾಲಿವುಡ್ ನ ಜನಪ್ರಿಯ ಸಿನಿಮಾವಾದ ಶೋಲೆಯ ಪ್ರಸಿದ್ಧ ಹಾಡು ‘ಯೇ ದೋಸ್ತಿ ಹಮ್ ನಹಿ ತೋಡೆಂಗೆ’ ಹಾಡನ್ನು ವಿಡಿಯೋದ ಹಿನ್ನೆಲೆಯಲ್ಲಿ ಪ್ಲೇ ಮಾಡಲಾಗಿದೆ. ಇಬ್ಬರು ಮಕ್ಕಳು ರಸ್ತೆಯ ಮೇಲೆ ಸೈಕಲ್ ಸವಾರಿ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೆ, ಬಾಲಕರು ಒಟ್ಟಿಗೆ ಸವಾರಿ ಮಾಡಲಿಲ್ಲ. ಇಬ್ಬರೂ ಒಟ್ಟಿಗೆ ಪೆಡಲ್ ಮಾಡುವ ಮೂಲಕ ಸೈಕಲ್ ವೇಗದಲ್ಲಿ ಚಲಿಸಲು ಸಹಾಯ ಮಾಡಿದ್ದಾರೆ. ಇಬ್ಬರೂ ತಲಾ ಒಂದು ಪೆಡಲ್ ಮೇಲೆ ನಿಂತು, ಸೈಕಲ್ ತುಳಿದಿರುವುದು ವಿಶೇಷ. ವಿಡಿಯೋವನ್ನು ನೆಟ್ಟಿಗರು ಇಷ್ಟಪಟ್ಟಿದ್ದು, ನಗುವ ಎಮೋಜಿಗಳೊಂದಿಗೆ ಕಾಮೆಂಟ್ಗಳನ್ನು ತುಂಬಿದ್ದಾರೆ.