alex Certify ಬಾಲಕನ ಶವ ಸಾಗಿಸಲು ಆಂಬುಲೆನ್ಸ್​ ನೀಡಲು ನಿರಾಕರಣೆ..! ಬೈಕ್​ನಲ್ಲಿಯೇ ಪುತ್ರನ ಶವ ಸಾಗಿಸಿದ ಪೋಷಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕನ ಶವ ಸಾಗಿಸಲು ಆಂಬುಲೆನ್ಸ್​ ನೀಡಲು ನಿರಾಕರಣೆ..! ಬೈಕ್​ನಲ್ಲಿಯೇ ಪುತ್ರನ ಶವ ಸಾಗಿಸಿದ ಪೋಷಕರು

ಬುಡಕಟ್ಟು ಜನಾಂಗಕ್ಕೆ ಸೇರಿದ ಬಾಲಕನ ಶವವನ್ನು ಸಾಗಿಸಲು ಮೂವರು ಆ್ಯಂಬುಲೆನ್ಸ್​ ಚಾಲಕರು ನಿರಾಕರಿಸಿದ ಹಿನ್ನೆಲೆಯಲ್ಲಿ ಮೃತ ಬಾಲಕನ ಪೋಷಕರು ದ್ವಿಚಕ್ರವಾಹನದಲ್ಲಿಯೇ ಪುತ್ರನ ಶವವನ್ನು 40 ಕಿಲೋಮೀಟರ್​ ದೂರದವರೆಗೆ ಸಾಗಿಸಿದ ಅಮಾನವೀಯ ಘಟನೆಯು ಆಂಧ್ರಪ್ರದೇಶದ ಪಾಲ್ಘರ್​​ನ ಮೊಖಾಡದಲ್ಲಿ ನಡೆದಿದೆ. ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಮೂವರು ಆ್ಯಂಬುಲೆನ್ಸ್​ ಚಾಲಕರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಒಂದನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕ ಅಜಯ್​ ಪರ್ದಿ ನ್ಯುಮೋನಿಯಾದಿಂದಾಗಿ ಜವಹಾರ್​​ನ ಕೋಟೇಜ್​ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಈತನ ತಂದೆ ಯುವರಾಜ್​ ಪರ್ದಿ ವೃತ್ತಿಯಲ್ಲಿ ಕೂಲಿ ಕಾರ್ಮಿಕ. ತಂದೆಯು ತನ್ನ ಮಗನ ಶವವನ್ನು ಸದಕ್ವಾಡಿ ಗ್ರಾಮದಲ್ಲಿರುವ ತಮ್ಮ ಮನೆಗೆ ಸಾಗಿಸಲು ಆ್ಯಂಬುಲೆನ್ಸ್​ ವ್ಯವಸ್ಥೆಗೆ ಮುಂದಾದರು. ಈ ಆಸ್ಪತ್ರೆಯಿಂದ ಮೃತ ಬಾಲಕನ ನಿವಾಸ 40 ಕಿಲೋಮೀಟರ್​ ದೂರದಲ್ಲಿತ್ತು. ಆದರೆ ಆಸ್ಪತ್ರೆಯಲ್ಲಿದ್ದ ಮೂವರು ಆ್ಯಂಬುಲೆನ್ಸ್​ ಸಿಬ್ಬಂದಿ ಶವವನ್ನು ಸಾಗಿಸಲು ನಿರಾಕರಿಸಿದ್ದಾರೆ.

ಇದರಿಂದ ಬೇಸತ್ತ ಮೃತ ಬಾಲಕನ ಪೋಷಕರು ಪುತ್ರನ ಶವವನ್ನು ಕಂಬಳಿಯಲ್ಲಿ ಸುತ್ತಿಕೊಂಡು ಸ್ಕೂಟರ್​​ನಲ್ಲಿ ಇರಿಸಿಕೊಂಡು ಮನೆಯತ್ತ ಸಾಗಿದ್ದಾರೆ. ಇನ್ನು ಈ ವಿಚಾರವಾಗಿ ಆ್ಯಂಬುಲೆನ್ಸ್​ ಸಿಬ್ಬಂದಿ ನಡೆಯನ್ನು ಸಮರ್ಥಿಸಿಕೊಂಡ ಕಾಟೇಜ್​ ಆಸ್ಪತ್ರೆಯ ಸಿಎಂಒ ಡಾ. ರಾಮದಾಸ ಮರದ್​, ಮೃತದೇಹಗಳನ್ನು ಸಾಗಿಸಲು ಸರ್ಕಾರಿ ಆ್ಯಂಬುಲನ್ಸ್​ಗಳಿಗೆ ಅವಕಾಶವಿರಲಿಲ್ಲ. ಆಸ್ಪತ್ರೆಯಲ್ಲಿ ಶವ ಸಾಗಿಸುವ ವಾಹನ ಇರಲಿಲ್ಲ. ಹೀಗಾಗಿ ನಾವು ಖಾಸಗಿ ಆ್ಯಂಬುಲೆನ್ಸ್​ ವ್ಯವಸ್ಥೆ ಮಾಡಲು ಮುಂದಾಗಿದ್ದೆವು. ಆದರೆ ಖಾಸಗಿ ಆ್ಯಂಬುಲೆನ್ಸ್​ ಚಾಲಕ ದೊಡ್ಡ ಮೊತ್ತವನ್ನು ವಿಧಿಸಿದನು. ಈ ಮೊತ್ತವನ್ನು ಭರಿಸಲು ಯುವರಾಜನಿಗೆ ಸಾಧ್ಯವಾಗಲಿಲ್ಲ. ಆದರೆ ನಾವು ಮೂವರು ಆ್ಯಂಬುಲೆನ್ಸ್​ ಚಾಲಕರನ್ನು ವಜಾಗೊಳಿಸಿದ್ದೇವೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...