alex Certify ಬಾಯಾರಿದ ಅರ್ಮಡಿಲ್ಲೊ ಜೀವಿಗೆ ನೀರುಣಿಸಿದ ವ್ಯಕ್ತಿ: ನೆಟ್ಟಿಗರಿಂದ ಮೆಚ್ಚುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯಾರಿದ ಅರ್ಮಡಿಲ್ಲೊ ಜೀವಿಗೆ ನೀರುಣಿಸಿದ ವ್ಯಕ್ತಿ: ನೆಟ್ಟಿಗರಿಂದ ಮೆಚ್ಚುಗೆ

Such high temperatures are inhospitable not only for humans but also for animals.  ದೇಶದಲ್ಲಿ ಬಿಸಿಲಿನ ಝಳಕ್ಕೆ ಮನುಷ್ಯರು ಮಾತ್ರವಲ್ಲ ಪ್ರಾಣಿ-ಪಕ್ಷಿಗಳು ಕೂಡ ಕಂಗಾಲಾಗಿವೆ. ನೀರಿಗಾಗಿ ಅವುಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿದೆ.

ದೇಶದ ಹಲವು ರಾಜ್ಯಗಳು 122 ವರ್ಷಗಳಲ್ಲಿ ಮಾರ್ಚ್‌ನಲ್ಲಿ ಅತಿ ಹೆಚ್ಚು ತಾಪಮಾನವನ್ನು ದಾಖಲಿಸಿವೆ. ಈ ವರ್ಷ ಸರಾಸರಿ ಗರಿಷ್ಠ ತಾಪಮಾನವು 2004 ರಲ್ಲಿ 30.67 ಡಿಗ್ರಿ ಸೆಲ್ಸಿಯಸ್‌ನ ಹಿಂದಿನ ದಾಖಲೆಯನ್ನು ಮೀರಿಸಿದೆ. ರಾಷ್ಟ್ರ ರಾಜಧಾನಿಯು 12 ವರ್ಷಗಳಲ್ಲಿ ಏಪ್ರಿಲ್ 28 ರಂದು 43.5 ಡಿಗ್ರಿ ಸೆಲ್ಸಿಯಸ್‌ನಷ್ಟು ಅತಿ ಹೆಚ್ಚು ತಾಪಮಾನವನ್ನು ಏಪ್ರಿಲ್ ನಲ್ಲಿ ದಾಖಲಿಸಿದೆ. ದೇಶ ಮಾತ್ರವಲ್ಲ, ಪ್ರಪಂಚದ ಹಲವೆಡೆ ಬಿಸಿಲಿನ ತಾಪಮಾನ ಹೆಚ್ಚಾಗಿದೆ.

ಇದೀಗ, ಬಿಸಿಲಿನ ತಾಪಕ್ಕೆ ಪ್ರಾಣಿಗಳು ಹೇಗೆ ತತ್ತರಿಸುತ್ತಿವೆ ಎಂಬುದನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಐಎಫ್‌ಎಸ್ ಅಧಿಕಾರಿಯಾಗಿರುವ ಸುಸಂತ ನಂದಾ ಅವರು ಟ್ವಿಟ್ಟರ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ವ್ಯಕ್ತಿಯೊಬ್ಬರು ಬಾಯಾರಿದ ಅರ್ಮಡಿಲ್ಲೊ ಜೀವಿಗೆ ನೀರಿನ ಕ್ಯಾನ್ ಮೂಲಕ ನೀರು ನೀಡಿದ್ದಾರೆ.

ಮೊದಲಿಗೆ ವ್ಯಕ್ತಿಯನ್ನು ಕಂಡು ಆರ್ಮಡಿಲ್ಲೊ ಭಯಪಟ್ಟಿದೆ. ಆದರೆ, ಆತ ಕ್ಯಾನ್ ಮೂಲಕ ನೀರನ್ನು ಸುರಿಯುತ್ತಿದ್ದಂತೆ, ಭಯಬಿಟ್ಟು ನೀರು ಕುಡಿದಿದೆ. ಈ ವಿಡಿಯೋ ವೈರಲ್ ಆಗಿದ್ದು, ವ್ಯಕ್ತಿಯ ಮಾನವೀಯತೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅರ್ಮಡಿಲೊಗಳು ಮುಖ್ಯವಾಗಿ ಲ್ಯಾಟಿನ್ ಅಮೇರಿಕಾ ಮತ್ತು ಯುನೈಟೆಡ್ ಸ್ಟೇಟ್ಸ್ನಲ್ಲಿ ಕಂಡುಬರುತ್ತವೆ.

ಈ ಸುಡುವ ಶಾಖದಲ್ಲಿ ಮನುಷ್ಯರು ಹೇಗಾದರೂ ಆಶ್ರಯ ಪಡೆಯಬಹುದು. ಆದರೆ, ಪ್ರಾಣಿಗಳ ಪರಿಸ್ಥಿತಿ ಮಾತ್ರ ಭೀಕರವಾಗಿದೆ. ಆದ್ದರಿಂದ, ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಆದಷ್ಟು ನೀರು ಒದಗಿಸಿ. ನಿಮ್ಮ ಬಾಲ್ಕನಿಗಳು ಮತ್ತು ಮೇಲ್ಛಾವಣಿಗಳಲ್ಲಿ ಕುಡಿಯುವ ನೀರಿನ ಬಟ್ಟಲುಗಳನ್ನು ಇರಿಸಬಹುದು. ಇದರಿಂದ ಬಾಯಾರಿದ ಪಕ್ಷಿಗಳು ಅಲ್ಲಿ ಬಂದು ನೀರು ಕುಡಿಯಬಹುದು.

— Susanta Nanda IFS (@susantananda3) April 26, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...