alex Certify ಬಾಯಲ್ಲಿ ನೀರೂರಿಸೋ ಚನ್ನ ಟಿಕ್ಕಾ ಮಸಾಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯಲ್ಲಿ ನೀರೂರಿಸೋ ಚನ್ನ ಟಿಕ್ಕಾ ಮಸಾಲ

Spicy Chickpea Tikka Masala Recipe and Nutrition - Eat This Muchಪ್ರತಿದಿನ ಚಪಾತಿಗೆ ಅದೇ ತರಕಾರಿ ಪಲ್ಯ ತಿಂದು ಬೋರಾಗಿದ್ರೆ, ವಿಶೇಷವಾದ ಚನ್ನ ಟಿಕ್ಕಾ ಮಸಾಲವನ್ನು ನೀವು ಟ್ರೈ ಮಾಡಬಹುದು. ಕೆಲವೇ ನಿಮಿಷಗಳಲ್ಲಿ ಈ ಚನ್ನ ಟಿಕ್ಕಾ ಮಸಾಲ ತಯಾರಾಗಿ ಬಿಡುತ್ತದೆ. ಹಾಗಾದ್ರೆ ಚನ್ನ ಟಿಕ್ಕಾ ಮಸಾಲ ಮಾಡೋದು ಹೇಗೆ ನೋಡೋಣ ಬನ್ನಿ.

ಮೊದಲಿಗೆ ಮಿಕ್ಸಿ ಜಾರಿಗೆ ಕತ್ತರಿಸಿಟ್ಟುಕೊಂಡ ಒಂದು ಈರುಳ್ಳಿ, ಸಣ್ಣದಾಗಿ ಹೆಚ್ಚಿಕೊಂಡ ಒಂದು ಹಸಿಮೆಣಸಿನಕಾಯಿ, ಹೆಚ್ಚಿಟ್ಟುಕೊಂಡ ಒಂದು ಟೊಮ್ಯಾಟೋ ಹಣ್ಣಿನ ಹೋಳು, 4 ಟೇಬಲ್ ಸ್ಪೂನ್​ನಷ್ಟು ನೀರು ಸೇರಿಸಿ ರುಬ್ಬಿಕೊಳ್ಳಬೇಕು.

ಈಗ ಸ್ಟೌ ಆನ್ ಮಾಡಿ, ಒಂದು ಕಡಾಯಿ ಇಟ್ಟು 2 ಟೇಬಲ್ ಸ್ಪೂನ್ ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಬೇಕು. ನಂತರ ಅರ್ಧ ಟೇಬಲ್ ಸ್ಪೂನ್ ಕರಿಮೆಣಸಿನ ಕಾಳು, 6 ಲವಂಗ, 2 ಏಲಕ್ಕಿ ಸೇರಿಸಿ ಚೆನ್ನಾಗಿ ಬಾಡಿಸಿಕೊಳ್ಳಬೇಕು.

ಬಳಿಕ ಒಂದು ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಬಾಡಿಸಿಕೊಳ್ಳಬೇಕು. ನಂತರ ಇದಕ್ಕೆ ರುಬ್ಬಿಕೊಂಡ ಟೊಮ್ಯಾಟೋ, ಈರುಳ್ಳಿ ಪ್ಯೂರಿ ಸೇರಿಸಿ ಮಿಶ್ರಣ ಮಾಡಬೇಕು. 5 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಇಟ್ಟು ಬಿಸಿ ಮಾಡಿಕೊಳ್ಳಬೇಕು.

ನಂತರ ಇದಕ್ಕೆ ಒಂದು ಸ್ಪೂನ್ ಟಿಕ್ಕಾ ಮಸಾಲ, ಒಂದು ಸ್ಪೂನ್ ಉಪ್ಪು , 1 ಚಮಚ ಅಚ್ಚಖಾರದ ಪುಡಿ ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು. ಬಳಿಕ 1 ನಿಮಿಷ ಬೇಯಿಸಿಕೊಳ್ಳಬೇಕು. ಆ ನಂತರ 100 ಗ್ರಾಂ ಮೊಸರನ್ನು ಈ ಮಿಶ್ರಣಕ್ಕೆ ಸೇರಿಸಿ 2 ನಿಮಿಷಗಳ ಕಾಲ ಬೇಯಿಸಿಕೊಳ್ಳಬೇಕು.

ಇದಾದ ಬಳಿಕ ಬೇಯಿಸಿಕೊಂಡಿರುವ 200 ಗ್ರಾಂ ಚನ್ನವನ್ನು ಸೇರಿಸಿ ಮಿಶ್ರಣ ಮಾಡಿ 3 ನಿಮಿಷ ಬೇಯಿಸಿಕೊಳ್ಳಬೇಕು. ಬಳಿಕ ಅರ್ಧ ಚಮಚ ಗರಂ ಮಸಾಲ ಸೇರಿಸಿ 2 ನಿಮಿಷ ಬೇಯಿಸಿಕೊಳ್ಳಬೇಕು.

ಇಷ್ಟಾದ್ರೆ ಚನ್ನ ಟಿಕ್ಕಾ ಮಸಾಲ ಚಪಾತಿ, ರೋಟಿ, ಪೂರಿ ಜೊತೆಗೆ ಸವಿಯಲು ಸಿದ್ಧ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...