1 ಕಪ್ ಕೋವಾ, ಸಕ್ಕರೆ ಪುಡಿ – ½ ಕಪ್, ತೆಂಗಿನಕಾಯಿ ಪೌಡರ್ -ಅರ್ಧ ಕಪ್, 1 ಟೇಬಲ್ ಸ್ಪೂನ್ -ಬಾದಾಮಿ ಚಿಕ್ಕದ್ದಾಗಿ ಕತ್ತರಿಸಿದ್ದು, 1 ಟೇಬಲ್ ಸ್ಪೂನ್-ಗೋಡಂಬಿ -ಚಿಕ್ಕದ್ದಾಗಿ ಕತ್ತರಿಸಿದ್ದು, ಏಲಕ್ಕಿ ಪುಡಿ -1/4 ಟೀ ಸ್ಪೂನ್, ತುಪ್ಪ -1 ಟೇಬಲ್ ಸ್ಪೂನ್, 2 ಟೇಬಲ್ ಸ್ಪೂನ್ – ಹಾಲು.
ಮಾಡುವ ವಿಧಾನ:
ಒಂದು ಪ್ಯಾನ್ ಅನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ತುಪ್ಪ, ಹಾಲು ಹಾಕಿ ನಂತರ ಕೋವಾ ಅನ್ನು ಚೆನ್ನಾಗಿ ಮಿಕ್ಸ್ ಮಾಡಿ. ಗ್ಯಾಸ್ ಅನ್ನು ಸಣ್ಣ ಉರಿಯಲ್ಲಿ ಇಟ್ಟುಕೊಳ್ಳಿ.
ನಂತರ ಅರ್ಧ ಕಪ್ ಸಕ್ಕರೆ ಪುಡಿ, ಕೊಬ್ಬರಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಗೋಡಂಬಿ, ಬಾದಾಮಿ, ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿ. ನಂತರ ಗ್ಯಾಸ್ ಆಫ್ ಮಾಡಿ. ಇದು ಹದ ಬಿಸಿ ಇರುವಾಗ ಉಂಡೆ ಕಟ್ಟಿ. ತೆಂಗಿನಕಾಯಿ ತುರಿಯಲ್ಲಿ ಹೊರಳಾಡಿಸಿ.