alex Certify ಬಾಯಲ್ಲಿ ನೀರೂರಿಸುತ್ತೆ ನವಣೆ ಅಕ್ಕಿ ‘ಹಾಲುಬಾಯಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯಲ್ಲಿ ನೀರೂರಿಸುತ್ತೆ ನವಣೆ ಅಕ್ಕಿ ‘ಹಾಲುಬಾಯಿ’

Halbai Recipe : ಅಕ್ಕಿ ಹಾಲುಬಾಯಿ ರೆಸಿಪಿ - Kannada Boldsky

ಹಾಲುಬಾಯಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಮಾಡುವುದಕ್ಕೆ ಅಷ್ಟೇನೋ ಕಷ್ಟವಿಲ್ಲ. ಏನಾದರೂ ಸಿಹಿ ಮಾಡಿಕೊಂಡು ತಿನ್ನಬೇಕು ಅನಿಸಿದಾಗ ಸಿರಿಧಾನ್ಯದಿಂದ ಹಾಲುಬಾಯಿ ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಿರಿ.

ಬೇಕಾಗುವ ಸಾಮಗ್ರಿ:

½ ಕಪ್ ನವಣೆ ಅಕ್ಕಿ, ಬೆಲ್ಲ -1 ಕಪ್, ಏಲಕ್ಕಿ-ಚಿಟಿಕೆ, ತೆಂಗಿನಕಾಯಿ ತುರಿ-1/2 ಕಪ್, ನೀರು-ಅಗತ್ಯವಿರುವಷ್ಟು.

ಮಾಡುವ ವಿಧಾನ:

ನವಣೆ ಅಕ್ಕಿಯನ್ನು ಚೆನ್ನಾಗಿ ತೊಳೆದು ರಾತ್ರಿಯಿಡೀ ನೆನೆಸಿಡಿ. ನಂತರ ಬೆಲ್ಲವನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ¼ ಕಪ್ ನೀರು ಹಾಕಿ ಗ್ಯಾಸ್ ಮೇಲಿಟ್ಟು ಬೆಲ್ಲವನ್ನು ಕರಗಿಸಿಕೊಳ್ಳಿ. ನಂತರ ಅದನ್ನು ಹಾಲು ಬಾಯಿ ಮಾಡುವ ಪಾತ್ರೆಗೆ ಸೋಸಿಕೊಳ್ಳಿ.

ನಂತರ ಈ ನವಣೆ ಅಕ್ಕಿಯನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ತೆಂಗಿನತುರಿ ಸೇರಿಸಿ ಅದನ್ನು ಅಕ್ಕಿಯನ್ನು ನೆನೆಸಿಟ್ಟ ನೀರನ್ನು ಹಾಕಿ ರುಬ್ಬಿಕೊಳ್ಳಿ. ಇದನ್ನು ಬೆಲ್ಲದ ಪಾಕವಿರುವ ಪಾತ್ರೆಗೆ ಹಾಕಿಕೊಳ್ಳಿ.

ನಂತರ ಹದವಾದ ಉರಿಯಲ್ಲಿ ಇಟ್ಟುಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಈ ಹಿಟ್ಟು ತಳ ಬಿಡುವವರೆಗೆ ಮಗಚುತ್ತಾ ಇರಿ. ನಂತರ ಗ್ಯಾಸ್ ಆಫ್ ಮಾಡಿ. ತುಪ್ಪ ಸವರಿದ ಪಾತ್ರೆಗೆ ಇದನ್ನು ಹಾಕಿ ಆರಿದ ಮೇಲೆ ಕತ್ತರಿಸಿಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...