alex Certify ಬಾಬಿ ಡಿಯೋಲ್​-ನೀಲಂ ಬ್ರೇಕಪ್​ಗೆ ಕಾರಣವಾಗಿದ್ರಾ ನಟಿ ಪೂಜಾ ಭಟ್​….? ಹಲವು ವರ್ಷಗಳ ಬಳಿಕ ನಟಿಯಿಂದ ಬಂತು ಸ್ಪಷ್ಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಬಿ ಡಿಯೋಲ್​-ನೀಲಂ ಬ್ರೇಕಪ್​ಗೆ ಕಾರಣವಾಗಿದ್ರಾ ನಟಿ ಪೂಜಾ ಭಟ್​….? ಹಲವು ವರ್ಷಗಳ ಬಳಿಕ ನಟಿಯಿಂದ ಬಂತು ಸ್ಪಷ್ಟನೆ

ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿ ಇಟ್ಟುಕೊಳ್ಳಲು ಬಯಸುವವರಲ್ಲಿ ಬಾಲಿವುಡ್​ ನಟ ಬಾಬಿ ಡಿಯೋಲ್​ ಕೂಡ ಒಬ್ಬರು ಅಂತಾ ಹೇಳಿದರೆ ತಪ್ಪಾಗಲಾರದು. 1995ರಲ್ಲಿ ಬರಸಾತ್​ ಎಂಬ ಸಿನಿಮಾದ ಮೂಲಕ ಬಾಲಿವುಡ್​​ ಪ್ರವೇಶಿಸಿದ ಬಾಬಿ ಡಿಯೋಲ್​​ ಇದಾದ ಬಳಿಕ ತಮ್ಮ ರೊಮ್ಯಾಂಟಿಕ್​ ಅಭಿನಯದ ಮೂಲಕ ಹೆಂಗಳೆಯರ ಮನ ಗೆದ್ದಿದ್ದರು.

ಬಾಬಿ ಡಿಯೋಲ್‌ನ ಲಿಂಕ್-ಅಪ್ ವದಂತಿಗಳನ್ನು ನಾವು ಎಂದಿಗೂ ನೋಡಿಲ್ಲವಾದರೂ, ರೇಸ್ 3 ನಟ, ನೀಲಂ ಅವರೊಂದಿಗೆ 5 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದು, ಜೋಡಿಯು ತಮ್ಮ ಪಾಲುದಾರರೊಂದಿಗೆ ನೆಲೆಗೊಳ್ಳುವ ಮೊದಲು ನಿಮಗೆ ಆಶ್ಚರ್ಯವಾಗುತ್ತದೆ. ಆ ಸಮಯದಲ್ಲಿ ಈ ಜೋಡಿ ಬೇರ್ಪಡಲು ಪೂಜಾ ಭಟ್ ಕಾರಣ ಎಂದು ವದಂತಿಗಳು ಇದ್ದಾಗ, ನೀಲಂ ಅವರ ಬ್ರೇಕಪ್ ಬಗ್ಗೆ ಪ್ರತಿಕ್ರಿಯಿಸಿ ಪೂಜಾ ಅವರ ಒಳಗೊಳ್ಳುವಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದರು.

ಬಾಬಿ ಡಿಯೋಲ್​ ಬಗ್ಗೆ ಬಾಲಿವುಡ್​ನಲ್ಲಿ ಸಾಕಷ್ಟು ವದಂತಿಗಳು ಹರಡಿಲ್ಲವಾದರೂ ಸಹ ನೀಲಂ ಜೊತೆಯಲ್ಲಿ ಬಾಬಿ ಡಿಯೋಲ್​ ಐದು ವರ್ಷಗಳ ಕಾಲ ಡೇಟಿಂಗ್​ನಲ್ಲಿದ್ದರು ಎಂಬ ವಿಚಾರ ಅಭಿಮಾನಿಗಳಿಗೆ ಆಶ್ಚರ್ಯ ತರಿಸಿತ್ತು. ಆದರೆ ಕಾಲಾಂತರದಲ್ಲಿ ಇಬ್ಬರೂ ಪ್ರತ್ಯೇಕ ವಿವಾಹವಾಗಿದ್ದು ಪ್ರಸ್ತುತ  ತಮ್ಮ ಸಂಗಾತಿಗಳ ಜೊತೆ ಇದ್ದಾರೆ. ಆದರೆ ಇವರಿಬ್ಬರು ದೂರವಾಗಲು ಪೂಜಾ ಭಟ್​ ಕಾರಣ ಎಂಬ ಗುಸುಗುಸು ಕೂಡ ಹರಿದಾಡಿತ್ತು. ಆದರೆ ಇವರಿಬ್ಬರ ಸಂಬಂಧ ಹಳಸಲು ನಿಜವಾಗಿಯೂ ನಟಿ ಪೂಜಾ ಭಟ್​ ಕಾರಣವಾಗಿದ್ದರಾ ಎಂಬುದರ ಕುರಿತು ಇದೀಗ ನೀಲಂ ಮೌನ ಮುರಿದಿದ್ದಾರೆ.

ನಾನು ಹಾಗೂ ಬಾಬಿ ಡಿಯೋಲ್​ ಬೇರ್ಪಟ್ಟಿರೋದು ಸತ್ಯವಾದ ವಿಚಾರವೇ. ನಾನು ನನ್ನ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ. ಆದರೆ ಕೆಲವೊಂದು ಬಾರಿ ಆಧಾರವೇ ಇಲ್ಲದ ವದಂತಿಗಳು ಹರಿದಾಡಿಬಿಡುತ್ತದೆ. ಅಂತಹ ಸಂದರ್ಭಗಳಲ್ಲಿ ಸ್ಪಷ್ಟನೆಯನ್ನು ನೀಡಲೇಬೇಕಾಗುತ್ತದೆ. ಅಸತ್ಯ ವಿಚಾರಗಳನ್ನು ಜನರು ನಂಬುವಂತಾಗಬಾರದು. ಪೂಜಾ ಭಟ್​ರಿಂದಾಗಿಯೆ ನನ್ನ ಹಾಗೂ ಬಾಬಿ ಡಿಯೋಲ್​ ನಡುವೆ ಬ್ರೇಕಪ್​ ಆಯ್ತು ಎಂಬ ವಿಚಾರ ಎಲ್ಲೆಡೆ ಹರಿದಾಡಿತ್ತು. ಆದರೆ ಈ ಸುದ್ದಿ ಶುದ್ಧ ಸುಳ್ಳಾಗಿದೆ. ನಾನು ಪೂಜಾ ಭಟ್​ ಅಥವಾ ಇನ್ಯಾವುದೇ ಹುಡುಗಿಯ ಕಾರಣಕ್ಕಾಗಿ ಬಾಬಿ ಡಿಯೋಲ್​ ಜೊತೆ ಬ್ರೇಕಪ್​ ಮಾಡಿಕೊಂಡಿರಲಿಲ್ಲ. ನಾನು ಒಬ್ಬರಿಗೊಬ್ಬರು ಮಾತನಾಡಿಕೊಂಡು ಒಮ್ಮತದಿಂದ ಈ ನಿರ್ಧಾರ ಕೈಗೊಂಡಿದ್ದೆವು ಎಂದು ಸ್ಪಷ್ಟನೆ ನೀಡಿದ್ದಾರೆ.

ಅಂದಹಾಗೆ ಬಾಬಿ ಡಿಯೋಲ್​ ತಾನ್ಯಾ ಅಹುಜಾರನ್ನು ವರಿಸಿದ್ದರೆ, ನೀಲಂ ನಟ ಸಮೀರ್​ ಸೋನಿ ಜೊತೆಯಲ್ಲಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...