alex Certify ಬಾಡಿಗೆ ಮನೆಯಲ್ಲಿದ್ದರೂ HRA ಪಡೆಯುತ್ತಿಲ್ಲವೇ….? ಆದಾಯ ತೆರಿಗೆಯಲ್ಲಿ ಪಡೆಯಬಹುದು ವಿನಾಯಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಡಿಗೆ ಮನೆಯಲ್ಲಿದ್ದರೂ HRA ಪಡೆಯುತ್ತಿಲ್ಲವೇ….? ಆದಾಯ ತೆರಿಗೆಯಲ್ಲಿ ಪಡೆಯಬಹುದು ವಿನಾಯಿತಿ 

ಸಾಮಾನ್ಯವಾಗಿ ಉದ್ಯೋಗಿಗಳು ಸಂಬಳದ ಭಾಗವಾಗಿ ಮನೆ ಬಾಡಿಗೆ ಭತ್ಯೆ ಪಡೆಯುತ್ತಾರೆ. ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಆದಾಯ ತೆರಿಗೆಯಲ್ಲಿ, ಪಾವತಿಸಿದ ಬಾಡಿಗೆಯನ್ನು ಕಡಿತಗೊಳಿಸಲು ಅವಕಾಶವಿದೆ. ಆದರೆ ಸಂಬಳದ ಮೇಲೆ ಅವಲಂಬಿತವಾಗಿಲ್ಲದ ಜನರು ಅಂದರೆ ಸ್ವಂತ ವ್ಯವಹಾರ ಹೊಂದಿರುವವರು ಕೂಡ ಬಾಡಿಗೆ ರೂಪದಲ್ಲಿ ಪಾವತಿಸಿದ ಆದಾಯ ತೆರಿಗೆಯನ್ನು ಸಹ ಕಡಿತಗೊಳಿಸಬಹುದು.

1961ರ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80G ಪ್ರಕಾರ ನೀವು ಸ್ವಂತ ನಿವಾಸದಲ್ಲಿದ್ದು, ಅದು ಸಂಪೂರ್ಣ ಸುಸಜ್ಜಿತವಾಗಿರಲಿ ಅಥವಾ ಇಲ್ಲದೇ ಇರಲಿ ಬಾಡಿಗೆಗೆ ಸಂಬಂಧಪಟ್ಟ ತೆರಿಗೆ ಪಾವತಿಯಿಂದ ನೀವು ವಿನಾಯಿತಿ ತೆಗೆದುಕೊಳ್ಳಬಹುದು. ತೆರಿಗೆದಾರರು ಎಷ್ಟು ಕಡಿತ ಪಡೆಯಬಹುದು ಅನ್ನೋದು ಕೂಡ ಗಮನಿಸಬೇಕಾದ ಅಂಶ.

80GG ಅಡಿಯಲ್ಲಿ ಯಾವುದು ಕಡಿಮೆಯೋ ಅದನ್ನು ಮಾತ್ರ ಆದಾಯದಿಂದ ಕಡಿತಗೊಳಿಸಬಹುದು. ಒಟ್ಟು ಆದಾಯದಲ್ಲಿ ಶೇ.25ರಷ್ಟು ಅಂದ್ರೆ ಪ್ರತಿ ತಿಂಗಳು 5000 ರೂಪಾಯಿ ಮಾತ್ರ. ಪಾವತಿಸಿದ ಒಟ್ಟಾರೆ ಬಾಡಿಗೆಯಿಂದ ಒಟ್ಟು ಆದಾಯದ ಶೇ.10ರಷ್ಟನ್ನು ಕಡಿಮೆ ಮಾಡಿ. ತೆರಿಗೆ ವಿನಾಯಿತಿಯನ್ನು ಪಡೆಯಲು ಕೆಲವೊಂದು ನಿಯಮ ಮತ್ತು ಷರತ್ತುಗಳಿವೆ. ತೆರಿಗೆದಾರ ಸ್ವಯಂ ಉದ್ಯೋಗಿಯಾಗಿರಬಹುದು ಅಥವಾ ಸಂಬಳ ಪಡೆಯುತ್ತಿರಬಹುದು.

ತೆರಿಗೆದಾರರು 80GG ಕ್ಲೈಮ್ ಮಾಡುತ್ತಿರುವ ವರ್ಷದಲ್ಲಿ HRA ಸ್ವೀಕರಿಸಿಲ್ಲ ಎಂಬುದನ್ನು ದೃಢಪಡಿಸಬೇಕು. ಪ್ರಸ್ತುತ ವಾಸಿಸುತ್ತಿರುವ ಸ್ಥಳದಲ್ಲಿ ಕಚೇರಿಯನ್ನು ಹೊಂದಿದ್ದರೆ, ಅಥವಾ ಅಲ್ಲಿ ಉದ್ಯೋಗ ನಿರ್ವಹಿಸುತ್ತಿದ್ರೆ, ವ್ಯಾಪಾರ, ವೃತ್ತಿಯನ್ನು ಮಾಡುತ್ತಿದ್ರೆ ಆ ನಿವಾಸವು ಅವನ, ಸಂಗಾತಿಯ ಅಥವಾ ಅಪ್ರಾಪ್ತ ಮಗುವಿಗೆ ಅನ್ವಯಿಸುವುದಿಲ್ಲ. ನೀವು ಬಾಡಿಗೆ ಪಾವತಿಯ ವಿವರಗಳೊಂದಿಗೆ ಫಾರ್ಮ್ 10BA ಅನ್ನು ಸಲ್ಲಿಸಬೇಕು.

ಯಾವುದೇ ಸ್ಥಳದಲ್ಲಿ ಯಾವುದೇ ವಸತಿ ಆಸ್ತಿಯನ್ನು ಹೊಂದಿದ್ದರೆ, ಅದರ ಆದಾಯವು ಇತರ ವಿಭಾಗದ ಅಡಿಯಲ್ಲಿ ತೆರಿಗೆಗೆ ಒಳಪಟ್ಟಿದ್ದರೆ, ಸೆಕ್ಷನ್ 80GG ಅಡಿಯಲ್ಲಿ ಯಾವುದೇ ಕಡಿತವನ್ನು ಅನುಮತಿಸಲಾಗುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...