alex Certify ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಸೃಷ್ಟಿಸುತ್ತಿರುವ ಕೆಜಿಎಫ್ 2 | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಸೃಷ್ಟಿಸುತ್ತಿರುವ ಕೆಜಿಎಫ್ 2

ಹೊಂಬಾಳೆ ಫಿಲಂಸ್ ವಿಜಯ್ ಕಿರಗಂದೂರ್ ನಿರ್ಮಿಸಿರುವ ಪ್ರಶಾಂತ್ ನೀಲ್ ನಿರ್ದೇಶನದ ಯಶ್ ಸಂಜಯ್ ದತ್ ಶ್ರೀನಿಧಿ ಶೆಟ್ಟಿ ರವೀನ ಟಂಡನ್ ಪ್ರಕಾಶ್ ರಾಜ್ ತಾರಾಗಣವಿರುವ ಕೆಜಿಎಫ್ 2 ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆಯತ್ತ ದಾಪುಗಾಲು ಇಡುತ್ತಿದೆ.

ಬಾಲಿವುಡ್ ನಲ್ಲಿ ಕೆಜಿಎಫ್ 2 ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಹಿಂದಿ ಚಿತ್ರರಂಗದ ದಾಖಲೆಗಳನ್ನೆಲ್ಲ ಮುರಿದು ಅತಿ ಹೆಚ್ಚು ಗಳಿಕೆ ಹೊಂದಿರುವ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸಿನಿಮಾದ ಹಿಂದಿ ಅವತರಣಿಕೆಯಲ್ಲಿ ಮೊದಲ ದಿನವೇ 53.95 ಕೋಟಿ ರೂಪಾಯಿಗಳನ್ನು ಗಳಿಸಿ ದಾಖಲೆ ನಿರ್ಮಿಸಿದೆ. ಇದೀಗ ಬಾಲಿವುಡ್ ನಲ್ಲಿ 250 ಕೋಟಿ ರೂಪಾಯಿ ಕ್ಲಬ್ ಸೇರಿ ತನ್ನ ನಾಗಾಲೋಟವನ್ನು ಮುಂದುವರಿಸಿದೆ.

ಈ ಹಿಂದೆ ತೆರೆ ಕಂಡಿದ್ದ ಬಾಹುಬಲಿ 2 ಎಂಟು ದಿನಗಳಲ್ಲಿ ಈ ಸಾಧನೆ ಮಾಡಿತ್ತು. ಇದೇ ಈವರೆಗಿನ ಸಾಧನೆಯಾಗಿತ್ತು. ಹಿಂದಿಯ ದಂಗಲ್, ಸಂಜು, ಟೈಗರ್ ಜಿಂದಾ ಹೆ ಸಿನಿಮಾಗಳು 250 ಕೋಟಿ ಕ್ಲಬ್ ಸೇರಲು ಹತ್ತು ದಿನ ತೆಗೆದುಕೊಂಡಿದ್ದವು.

ಏಳು ದಿನಗಳಲ್ಲಿ ಒಟ್ಟಾರೆಯಾಗಿ 255.05 ಕೋಟಿ ರೂಪಾಯಿ ಗಳಿಸಿದ್ದು ಹಿಂದಿ ಅವತರಣಿಕೆಯಲ್ಲಿ 350 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಸುವ ಸಾಧ್ಯತೆ ಇದೆ.

ಮೊದಲ ವಾರಾಂತ್ಯಕ್ಕೆ 193.99 ಕೋಟಿ ರೂಪಾಯಿ ಗಳಿಸಿತ್ತು. ಇದುವರೆಗೂ ಭಾರತದ ಯಾವ ಚಿತ್ರಗಳೂ ಈ ಸಾಧನೆಯನ್ನು ಮಾಡಿಲ್ಲ. 2016ರಲ್ಲಿ ತೆರೆಕಂಡಿದ್ದ ಸಲ್ಮಾನ್ ಖಾನ್ ಅಭಿನಯದ ಸುಲ್ತಾನ್ ಸಿನಿಮಾ 180 ಕೋಟಿ ಗಳಿಸಿದ್ದು ಈವರೆಗಿನ ಸಾಧನೆಯಾಗಿತ್ತು.

ಇದೀಗ ಕನ್ನಡದ ಕೆಜಿಎಫ್ 2 ಸಿನಿಮಾ ದಂಗಲ್, ಬಾಹುಬಲಿ 2 ಸಿನಿಮಾಗಳ ದಾಖಲೆಗಳನ್ನು ಅಳಿಸಿ ಹಾಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...