alex Certify ಬಾಂಗ್ಲಾ ಸೂಪರ್ ಸ್ಟಾರ್ ಅಲೋಮ್ ಜೊತೆ ಹಾಡಿದ ಇಂಟರ್ನೆಟ್ ಸೆನ್ಸೇಷನ್ ರಾನು ಮೊಂಡಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಂಗ್ಲಾ ಸೂಪರ್ ಸ್ಟಾರ್ ಅಲೋಮ್ ಜೊತೆ ಹಾಡಿದ ಇಂಟರ್ನೆಟ್ ಸೆನ್ಸೇಷನ್ ರಾನು ಮೊಂಡಲ್

ಇಂಟರ್ನೆಟ್ ಸೆನ್ಸೇಷನ್ ರಾನು ಮೊಂಡಲ್ ಅವರು ಬಾಂಗ್ಲಾದೇಶದ ಸೂಪರ್‌ಸ್ಟಾರ್ ಹೀರೋ ಅಲೋಮ್ ಅವರೊಂದಿಗೆ ಬಂಗಾಳಿ ಹಾಡನ್ನು ಹಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ.

ಬಾಂಗ್ಲಾದೇಶದಲ್ಲಿ ಬಹಳ ಜನಪ್ರಿಯರಾಗಿರುವ ಹೀರೋ ಅಲೋಮ್ ಅವರೊಂದಿಗೆ ರಾನು ಮೊಂಡಲ್ ಹಾಡಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ತಮ್ಮ ಫೇಸ್‌ಬುಕ್ ನಲ್ಲಿ ರಾನು ಮೊಂಡಾಲ್ ಜೊತೆ ಹಾಡುವುದಾಗಿ ಘೋಷಿಸಿದ್ದರು. ಇದೀಗ, ಅಲೋಮ್ ಅವರು ತಮ್ಮ ಹಾಡಿನ ರೆಕಾರ್ಡ್ ಮಾಡುತ್ತಿರುವ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದಾರೆ.

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ರಾನು ಮೊಂಡಲ್ ಮತ್ತು ಹೀರೋ ಅಲೋಮ್ ಇಬ್ಬರೂ ತಮ್ಮ ಹಾಡನ್ನು ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಮಾಡುವುದನ್ನು ಕಾಣಬಹುದು. ನಂತರ ಇಬ್ಬರು ಚಿಕ್ಕ ಸೆಷನ್‌ನಲ್ಲಿ ಪಾಲ್ಗೊಳ್ಳುತ್ತಾರೆ. ಈ ವೇಳೆ ರಾನು ಕೆಲವು ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಈ ವಿಡಿಯೋವನ್ನು 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ನವೆಂಬರ್ 3 ರಂದು, ಹೀರೋ ಅಲೋಮ್ ಫೇಸ್‌ಬುಕ್‌ನಲ್ಲಿ ರಾನು ಮೊಂಡಲ್ ಅವರೊಂದಿಗಿನ ವರ್ಚುವಲ್ ಸಂಭಾಷಣೆಯ ತುಣುಕನ್ನು ಹಂಚಿಕೊಂಡಿದ್ದರು. ಅಲೋಮ್ ನಿರ್ಮಿಸುತ್ತಿರುವ ಎರಡು ಚಿತ್ರಗಳಿಗೆ ಹಾಡುವ ಅವಕಾಶವನ್ನು ರಾನು ಮೊಂಡಲ್ ಪಡೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...