alex Certify ಬಸ್ ನಿಲ್ದಾಣದಲ್ಲಿ ವೃದ್ಧ ವ್ಯಕ್ತಿಯ ಬೊಂಬಾಟ್ ಭಲ್ಲೆ ಭಲ್ಲೆ ಸ್ಟೆಪ್ಸ್…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್ ನಿಲ್ದಾಣದಲ್ಲಿ ವೃದ್ಧ ವ್ಯಕ್ತಿಯ ಬೊಂಬಾಟ್ ಭಲ್ಲೆ ಭಲ್ಲೆ ಸ್ಟೆಪ್ಸ್…..!

Viral Video: Happy Uncle Dances To Punjabi Songs At Sirsa Bus Stand As People Wait. Watchಏನಾದರೂ ಮನಸ್ಸಿನಲ್ಲಿ ಬೇಸರವಿದ್ದಾಗ ನೃತ್ಯ, ಹಾಡು ಮುಂತಾದ ವಿಡಿಯೋ ನೋಡಿದ್ರೆ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ಇದೀಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಪಂಜಾಬಿ ಹಾಡುಗಳಿಗೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ,

ಹೌದು, ಈ ವ್ಯಕ್ತಿರು ಬಹುಶಃ ಬಸ್‌ಗಾಗಿ ಕಾಯುತ್ತಿರುವಾಗ ಅತ್ಯಂತ ಸಂತೋಷದಾಯಕ ಪ್ರಯಾಣಿಕರಾಗಿದ್ದಾರೆ ಎಂದೆನಿಸುತ್ತದೆ. ಹರಿಯಾಣದ ಸಿರ್ಸಾದ ಬಸ್ ನಿಲ್ದಾಣದಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಎಲ್ಲಾ ಜನರು ಹತಾಶೆಯ ಮುಖಗಳೊಂದಿಗೆ ಸುಡುವ ಬಿಸಿಲಿನಲ್ಲಿ ತಮ್ಮ ಬಸ್‌ಗಳಿಗಾಗಿ ಕಾಯುತ್ತಿರುವಾಗ, ವ್ಯಕ್ತಿಯೊಬ್ಬರು ನೃತ್ಯ ಮಾಡುತ್ತಾ ಎಂಜಾಯ್ ಮಾಡಿದ್ದಾರೆ.

ಗುರ್ ನಾಲೋ ಇಷ್ಕ್ ಮಿಥಾ ಎಂಬ ಪಂಜಾಬಿ ಗೀತೆಗೆ ವೃದ್ಧ ಕುಣಿದು ಕುಪ್ಪಳಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ಈ ರೀತಿ ಡಾನ್ಸ್ ಮಾಡುತ್ತಿರುವ ವೃದ್ಧ ವ್ಯಕ್ತಿಯನ್ನು ಕಂಡು ಅಲ್ಲಿದ್ದ ಜನರು ಅಚ್ಚರಿಗೊಂಡಿದ್ದಾರೆ. ಬಿಳಿ ಧೋತಿ, ಕುರ್ತಾ ತೊಟ್ಟಿದ್ದ ವೃದ್ಧ ತನ್ನನ್ನು ತಾನೇ ಮರೆತು ಖುಷಿಯಿಂದ, ಬಹಳ ಸಂಭ್ರಮದಿಂದ ಭಲ್ಲೇ ಭಲ್ಲೇ ಸ್ಟೆಪ್ಸ್ ಹಾಕಿದ್ದಾರೆ.

ಈ ಮೂಲಕ ಜನರಿಗೆ ಮನರಂಜನೆ ನೀಡಲು ಮತ್ತು ಅವರು ಯಾವುದೇ ಕಾರಣವಿಲ್ಲದೆ ಸಂತೋಷವಾಗಿರಬಹುದು ಎಂಬುದನ್ನು ವೃದ್ಧ ವ್ಯಕ್ತಿ ತೋರಿಸಿದ್ದಾರೆ. ವೃದ್ಧನ ನೃತ್ಯ ಕೌಶಲ್ಯವನ್ನು ಹಲವಾರು ಮಂದಿ ತಮ್ಮ ಮೊಬೈಲ್ ಗಳಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಕೂಡ ಇಷ್ಟಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...