alex Certify ಬಳಕೆದಾರರ ಬಹುದಿನದ ಬೇಡಿಕೆಗೆ ಟಿಕ್‌ ಟಾಕ್‌ ‌ʼಗ್ರೀನ್‌ ಸಿಗ್ನಲ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಳಕೆದಾರರ ಬಹುದಿನದ ಬೇಡಿಕೆಗೆ ಟಿಕ್‌ ಟಾಕ್‌ ‌ʼಗ್ರೀನ್‌ ಸಿಗ್ನಲ್ʼ

ಟಿಕ್​ಟಾಕ್​​ನ ವೇದಿಕೆಯಲ್ಲಿ ಮಾಡಲಾಗುವ ವಿಡಿಯೋ ಅವಧಿ ಹೆಚ್ಚಿಸಲು ಮುಂದಿನ ಕೆಲ ವಾರಗಳಲ್ಲೇ ಅನುಮತಿ ನೀಡೋದಾಗಿ ಕಂಪನಿಯು ಹೇಳಿದೆ. ಈ ಹೊಸ ಸೌಲಭ್ಯದ ಬಳಿಕ ಟಿಕ್​ಟಾಕ್​ ವಿಡಿಯೋಗಳನ್ನ 3 ನಿಮಿಷಗಳ ಕಾಲ ಮಾಡಬಹುದಾಗಿದೆ.

ಟಿಕ್​​ಟಾಕ್​​ನಲ್ಲಿ ಈವರೆಗೆ 60 ಸೆಕೆಂಡ್​​ಗಳವರೆಗೆ ಮಾತ್ರ ವಿಡಿಯೋಗಳನ್ನ ಮಾಡಲು ಅವಕಾಶವಿದೆ. ಈ ವಿಡಿಯೋಗಳನ್ನ ಎಡಿಟ್​ ಮಾಡಲು ಅದಕ್ಕೆ ಹಾಡನ್ನ ಸೇರಿಸಲು ಹೀಗೆ ಎಲ್ಲಾ ಅವಕಾಶಗಳು ಈ ಅಪ್ಲಿಕೇಶನ್​ನಲ್ಲಿಯೇ ಸಿಗುತ್ತದೆ. ಕಳೆದ ಕೆಲ ವರ್ಷಗಳಲ್ಲಿ ಈ ಅಪ್ಲಿಕೇಶನ್​ ಯುವ ಜನಾಂಗದವರ ಪಾಲಿಗೆ ಹಾಟ್​ ಫೇವರಿಟ್​ ಆಗಿ ಬದಲಾಗಿತ್ತು.

ಮುಂಬರುವ ವಾರಗಳಲ್ಲಿ ಟಿಕ್​ಟಾಕ್​​ನಲ್ಲಿ ಹೆಚ್ಚಿನ ಅವಧಿಯ ವಿಡಿಯೋಗಳನ್ನ ಪೋಸ್ಟ್​ ಮಾಡಲು ಎಲ್ಲರಿಗೂ ಅವಕಾಶ ನೀಡಲಾಗುತ್ತೆ. ಈ ಮೂಲಕ ನೀವು ಮೂರು ನಿಮಿಷಗಳ ಅವಧಿಯವರೆಗೆ ವಿಡಿಯೋಗಳನ್ನ ಮಾಡಬಹುದಾಗಿದೆ ಎಂದು ಟಿಕ್​​ಟಾಕ್​​ ಕಂಪನಿ ಹೇಳಿದೆ.

ಚೀನಾ ಮೂಲದ ಕಂಪನಿಯು ನಿರ್ಮಾಣ ಮಾಡಿರುವ ಈ ಟಿಕ್​ಟಾಕ್​ ಅಪ್ಲಿಕೇಶನ್​ ಸೋಶಿಯಲ್​ ಮೀಡಿಯಾದಲ್ಲಿ ಅತ್ಯಂತ ಪ್ರಚಲಿತವಾಗಿತ್ತು. ಬಳಿಕ ಭಾರತದಲ್ಲಿ ಈ ಅಪ್ಲಿಕೇಶನ್​​ನ್ನು ರದ್ದು ಮಾಡಲಾಗಿದೆ. ಆದರೆ ಅಮೆರಿಕದಲ್ಲಿ ಈ ಅಪ್ಲಿಕೇಶನ್​ ಬಳಕೆಗೆ ಮತ್ತೆ ಅವಕಾಶ ಕಲ್ಪಿಸಿದ ಬಳಿಕ ಭಾರತದ ಜೊತೆಗೂ ಮಾತುಕತೆಗೆ ಚೀನಾ ಮೂಲದ ಕಂಪನಿ ಮುಂದಾಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...