alex Certify ಬಲೂನ್​ ಎಂದುಕೊಂಡು ಜನರ ಮೇಲೆ ಕಾಂಡೋಮ್​ ಎಸೆದಿದ್ದ ರಾಖಿ ಸಾವಂತ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಲೂನ್​ ಎಂದುಕೊಂಡು ಜನರ ಮೇಲೆ ಕಾಂಡೋಮ್​ ಎಸೆದಿದ್ದ ರಾಖಿ ಸಾವಂತ್​..!

ಸದಾ ಒಂದಿಲ್ಲೊಂದು ವಿವಾದಗಳ ಮೂಲಕವೇ ಸುದ್ದಿಯಲ್ಲಿರುವ ರಾಖಿ ಸಾವಂತ್​ ಇದೀಗ ತಮ್ಮ ಬಾಲ್ಯದ ದಿನವೊಂದನ್ನು ಮೆಲುಕು ಹಾಕಿದ್ದಾರೆ. ಮೊದಲು ಈ ವಿಚಾರವನ್ನು ಹಂಚಿಕೊಳ್ಳಲು ಮುಜುಗರ ವ್ಯಕ್ತಪಡಿಸಿದ ರಾಖಿ ಬಳಿಕ ಹೋಳಿ ಹಬ್ಬದಂದು ಮನೆಯಲ್ಲಿ ನಡೆದ ಘಟನೆಯೊಂದನ್ನು ವಿವರಿಸಿದರು.

ನಾನು ಚಿಕ್ಕವಳಿದ್ದಾಗ ಹೋಳಿ ಹಬ್ಬದಂದು ನನಗೆ ಮನೆಯಲ್ಲಿ ಬಲೂನ್​ ಇರುವುದು ಕಾಣಿಸಿತು. ನಾನು ಆ ಬಲೂನಿನ ಒಳಗೆ ಬಣ್ಣದ ನೀರನ್ನು ತುಂಬಿದೆ. ಇದನ್ನು ಬೇರೆಯವರ ಮೇಲೆ ಎಸೆಯುವುದು ನನ್ನ ಉದ್ದೇಶವಾಗಿತ್ತು. ಹೋಳಿ ಹಬ್ಬದಲ್ಲಿ ಈ ರೀತಿ ಮಾಡುವುದು ಸರ್ವೇ ಸಾಮಾನ್ಯ. ಆದರೆ ನಾನು ಈ ರೀತಿ ಬಲೂನನ್ನು ಎಸೆಯುತ್ತಿದ್ದಂತೆ ಎಲ್ಲರೂ ನನಗೆ ಬೈಯಲು ಆರಂಭಿಸಿದರು.

ನನಗೆ ಮೊದಲು ಏನಾಯಿತು ಎಂದು ತಿಳಿಯಲಿಲ್ಲ. ನಾನು ಇದರಲ್ಲಿ ತಪ್ಪೇನಿದೆ ಎಂದು ಕೇಳಿದೆ. ಬಳಿಕ ಅಲ್ಲಿ ನೆರೆದಿದ್ದವರು ಅದು ಬಲೂನ್​ ಅಲ್ಲ ಬದಲಾಗಿ ಕಾಂಡೋಮ್​ ಎಂದು ಹೇಳಿದರು ಎಂದು ತಮ್ಮ ಬಾಲ್ಯದಲ್ಲಿ ತಾವು ಮಾಡಿಕೊಂಡ ಎಡವಟ್ಟನ್ನು ವಿವರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...