ಸದಾ ಒಂದಿಲ್ಲೊಂದು ವಿವಾದಗಳ ಮೂಲಕವೇ ಸುದ್ದಿಯಲ್ಲಿರುವ ರಾಖಿ ಸಾವಂತ್ ಇದೀಗ ತಮ್ಮ ಬಾಲ್ಯದ ದಿನವೊಂದನ್ನು ಮೆಲುಕು ಹಾಕಿದ್ದಾರೆ. ಮೊದಲು ಈ ವಿಚಾರವನ್ನು ಹಂಚಿಕೊಳ್ಳಲು ಮುಜುಗರ ವ್ಯಕ್ತಪಡಿಸಿದ ರಾಖಿ ಬಳಿಕ ಹೋಳಿ ಹಬ್ಬದಂದು ಮನೆಯಲ್ಲಿ ನಡೆದ ಘಟನೆಯೊಂದನ್ನು ವಿವರಿಸಿದರು.
ನಾನು ಚಿಕ್ಕವಳಿದ್ದಾಗ ಹೋಳಿ ಹಬ್ಬದಂದು ನನಗೆ ಮನೆಯಲ್ಲಿ ಬಲೂನ್ ಇರುವುದು ಕಾಣಿಸಿತು. ನಾನು ಆ ಬಲೂನಿನ ಒಳಗೆ ಬಣ್ಣದ ನೀರನ್ನು ತುಂಬಿದೆ. ಇದನ್ನು ಬೇರೆಯವರ ಮೇಲೆ ಎಸೆಯುವುದು ನನ್ನ ಉದ್ದೇಶವಾಗಿತ್ತು. ಹೋಳಿ ಹಬ್ಬದಲ್ಲಿ ಈ ರೀತಿ ಮಾಡುವುದು ಸರ್ವೇ ಸಾಮಾನ್ಯ. ಆದರೆ ನಾನು ಈ ರೀತಿ ಬಲೂನನ್ನು ಎಸೆಯುತ್ತಿದ್ದಂತೆ ಎಲ್ಲರೂ ನನಗೆ ಬೈಯಲು ಆರಂಭಿಸಿದರು.
ನನಗೆ ಮೊದಲು ಏನಾಯಿತು ಎಂದು ತಿಳಿಯಲಿಲ್ಲ. ನಾನು ಇದರಲ್ಲಿ ತಪ್ಪೇನಿದೆ ಎಂದು ಕೇಳಿದೆ. ಬಳಿಕ ಅಲ್ಲಿ ನೆರೆದಿದ್ದವರು ಅದು ಬಲೂನ್ ಅಲ್ಲ ಬದಲಾಗಿ ಕಾಂಡೋಮ್ ಎಂದು ಹೇಳಿದರು ಎಂದು ತಮ್ಮ ಬಾಲ್ಯದಲ್ಲಿ ತಾವು ಮಾಡಿಕೊಂಡ ಎಡವಟ್ಟನ್ನು ವಿವರಿಸಿದ್ದಾರೆ.