alex Certify ಬಲು ರುಚಿಕರ ಈ ಎಗ್ ಬುರ್ಜಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಲು ರುಚಿಕರ ಈ ಎಗ್ ಬುರ್ಜಿ

ಮೊಟ್ಟೆಯಿಂದ ಬಿರಿಯಾನಿ, ಆಮ್ಲೇಟ್ ಮಾಡಿಕೊಂಡು ಸವಿಯುತ್ತೇವೆ.ಹಾಗೇ ಎಗ್ ಬುರ್ಜಿ ಕೂಡ ಒಮ್ಮೆ ಟ್ರೈ ಮಾಡಿ ನೋಡಿ. ಇದು ತುಂಬಾ ರುಚಿಕರವಾಗಿರುತ್ತದೆ. ಮಾಡುವುದಕ್ಕೂ ಬಲು ಸುಲಭ.

ಬೇಕಾಗುವ ಸಾಮಗ್ರಿಗಳು:

ಮೊಟ್ಟೆ-5, ಎಣ್ಣೆ-3 ಟೇಬಲ್ ಸ್ಪೂನ್, ಲವಂಗ-2, ಜೀರಿಗೆ-1/2 ಟೀ ಸ್ಪೂನ್, ಕೊತ್ತಂಬರಿ ಬೀಜ-1 ಟೀ ಸ್ಪೂನ್, ಮೆಂತೆಕಾಳು-4, ತೆಂಗಿನತುರಿ-1/2 ಕಪ್, ಸಾಸಿವೆ-1 ಟೀ ಸ್ಪೂನ್, ಜಜ್ಜಿದ ಬೆಳ್ಳುಳ್ಳಿ-5 ಎಸಳು, ಈರುಳ್ಳಿ-1/2 ಕಪ್, ಟೊಮೆಟೊ-1 ಕಪ್, ಉಪ್ಪು-ರುಚಿಗೆ ತಕ್ಕಷ್ಟು, ಅರಿಶಿನ-ಚಿಟಿಕೆ. ಒಣಮೆಣಸು-4.

ಮಾಡುವ ವಿಧಾನ:

ಗ್ಯಾಸ್ ಮೇಲೆ ಬಾಣಲೆಯಿಟ್ಟು ಅದಕ್ಕೆ 1 ಟೀ ಸ್ಪೂನ್ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಒಣಮೆಣಸು, ಕೊತ್ತಂಬರಿ ಕಾಳು, ಜೀರಿಗೆ, ಮೆಂತೆ, ಲವಂಗ ಹಾಕಿ ಮಧ್ಯಮ ಉರಿಯಲ್ಲಿ 4 ನಿಮಿಷಗಳ ಕಾಲ ಹುರಿಯಿರಿ. ನಂತರ ಇದು ತಣ್ಣಗಾದ ಮೇಲೆ ಒಂದು ಮಿಕ್ಸಿ ಜಾರಿಗೆ ಹಾಕಿ. ನಂತರ ಅರ್ಧ ಕಪ್ ತೆಂಗಿನ ತುರಿಗೆ ಸ್ವಲ್ಪ ನೀರು ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ.

ನಂತರ ಒಂದು ಪ್ಯಾನ್ ಗೆ 2 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಗ್ಯಾಸ್ ಮೇಲೆ ಇಡಿ. ನಂತರ ಇದಕ್ಕೆ ಸಾಸಿವೆ ಹಾಕಿ ಅದು ಸಿಡಿದ ಕೂಡಲೆ ಬೆಳ್ಳುಳ್ಳಿ ಹಾಕಿ. ನಂತರ ಈರುಳ್ಳಿ ಸೇರಿಸಿ 3 ನಿಮಿಷಗಳ ಕಾಲ ಹುರಿಯಿರಿ. ಆಮೇಲೆ ಟೊಮೆಟೊ, ಉಪ್ಪು, ಅರಿಶಿನ ಸೇರಿಸಿ ಟೊಮೆಟೊ ಮೆತ್ತಗಾಗುವವರೆಗೆ ಬೇಯಿಸಿಕೊಳ್ಳಿ.

ನಂತರ ಮಿಕ್ಸಿಯಲ್ಲಿ ಪುಡಿ ಮಾಡಿಕೊಂಡ ಪೌಡರ್ ಅನ್ನು ಸೇರಿಸಿ 5 ನಿಮಿಷಗಳ ಕಾಲ ಕೈಯಾಡಿಸಿ. ಆಮೇಲೆ ಮೊಟ್ಟೆ ಒಡೆದು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸಣ್ಣ ಉರಿಯಲ್ಲಿ 5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ರುಚಿಕರವಾದ ಎಗ್ ಬುರ್ಜಿ ಸವಿಯಲು ಸಿದ್ಧ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...