ದೀಪಾವಳಿಗೆ ದಿನಗಣನೆ ಆರಂಭವಾಗಿದೆ. ಹಬ್ಬಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಮಾರುಕಟ್ಟೆಯಲ್ಲಿ ಬಗೆ ಬಗೆ ವಸ್ತುಗಳು ಗ್ರಾಹಕರನ್ನು ಸೆಳೆಯುತ್ತಿವೆ. ವಿನ್ಯಾಸದ ದೀಪಗಳು, ಲೈಟಿಂಗ್ಸ್, ರಂಗೋಲಿ, ಮೇಣದ ಬತ್ತಿಗಳು ಮಾರುಕಟ್ಟೆಯಲ್ಲಿ ಕಂಗೊಳಿಸುತ್ತಿವೆ. ಬದಲಾದ ಸಮಯದಲ್ಲಿ ಮನೆಯನ್ನು ಅಲಂಕರಿಸುವ ರೀತಿ ಕೂಡ ಬದಲಾಗಿದೆ.
ದೀಪಾವಳಿಯಲ್ಲಿ ಮನೆ ತುಂಬ ದೀಪ ಬೆಳಗಲಾಗುತ್ತದೆ. ಮನೆ ಎಷ್ಟು ಅಲಂಕಾರಗೊಂಡಿದ್ದರೂ ರಂಗೋಲಿಯಿಲ್ಲದ ಮನೆ ಮನೆಯಲ್ಲ. ಈ ದಿನ ಮನೆ ಮುಂದೆ ರಂಗೋಲಿ ಹಾಕುವುದು ಶುಭವೆಂದು ಪರಿಗಣಿಸಲಾಗಿದೆ. ಮನೆ ಮುಂದೆ ರಂಗೋಲಿ ಹಾಕಿದ್ರೆ ತಾಯಿ ಲಕ್ಷ್ಮಿ ಪ್ರಸನ್ನಳಾಗ್ತಾಳೆಂಬ ನಂಬಿಕೆಯೂ ಇದೆ.
ಹೊಸ ಗೆಳೆಯನನ್ನು ಹುಡುಕಿಕೊಂಡ ಹೃತಿಕ್ ರೋಷನ್ ಮಾಜಿ ಪತ್ನಿ
ದೀಪಾವಳಿಯಂದು ಮನೆ ಮುಂದೆ ರಂಗೋಲಿ ಹಾಕುವುದು ಹಳೆಯ ಸಂಪ್ರದಾಯ. ಬಣ್ಣ ಬಣ್ಣದ, ಬಗೆ ಬಗೆ ವಿನ್ಯಾಸದ ರಂಗೋಲಿಗಳನ್ನು ಮನೆ ಮುಂದೆ ಹಾಕಲಾಗುತ್ತದೆ. ಹೊಸ ಹೊಸ ರಂಗೋಲಿ ಡಿಸೈನ್ ಗಳು ನೆಟ್ ನಲ್ಲಿಯೂ ಸಿಗುತ್ವೆ. ಯುಟ್ಯೂಬ್, ಫೇಸ್ಬುಕ್ ಗಳಲ್ಲಿ ರಂಗೋಲಿ ಡಿಸೈನ್ ಗಳನ್ನು ನಾವು ನೋಡಬಹುದಾಗಿದೆ. ಈಗ ಇನ್ಸ್ಟ್ರಾಗ್ರಾಮನ್ನೂ ರಂಗೋಲಿ ಆವರಿಸಿದೆ.