alex Certify ಬರ್ತಡೇ ಬಾಯ್‌ ಅಲ್ಲು ಅರ್ಜುನ್‌ ರ ಕಾರ್‌ ಕ್ರೇಜ್ ಬಗ್ಗೆ ನಿಮಗೆ ಗೊತ್ತಾ….? ʼಪುಷ್ಪರಾಜ್‌ʼ ಬಳಿಯಿವೆ ಹಲವು ಐಷಾರಾಮಿ ಕಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರ್ತಡೇ ಬಾಯ್‌ ಅಲ್ಲು ಅರ್ಜುನ್‌ ರ ಕಾರ್‌ ಕ್ರೇಜ್ ಬಗ್ಗೆ ನಿಮಗೆ ಗೊತ್ತಾ….? ʼಪುಷ್ಪರಾಜ್‌ʼ ಬಳಿಯಿವೆ ಹಲವು ಐಷಾರಾಮಿ ಕಾರು

ತಮ್ಮ ವಿಶಿಷ್ಟ ಸ್ಟೈಲ್‌, ಅತ್ಯದ್ಭುತ ನಟೆನೆಯಿಂದ್ಲೇ ಮನೆಮಾತಾಗಿದ್ದಾರೆ ಪುಷ್ಪಾ ಖ್ಯಾತಿಯ ನಟ ಅಲ್ಲು ಅರ್ಜುನ್.‌ ಇವತ್ತು ಅಲ್ಲು ಅರ್ಜುನ್‌ ಗೆ ಹುಟ್ಟುಹಬ್ಬದ ಸಡಗರ. ಕೇವಲ ನಟನೆಯಿಂದ ಮಾತ್ರ ಅಲ್ಲು ಅಭಿಮಾನಿಗಳ ಮನಗೆದ್ದಿದ್ದಾರೆ ಅಂದ್ಕೋಬೇಡಿ. ಅವರ ದುಬಾರಿ ಜೀವನ ಶೈಲಿ ಕೂಡ ಫ್ಯಾನ್ಸ್‌ ಗೆ ಸಿಕ್ಕಾಪಟ್ಟೆ ಇಷ್ಟ. ಈ ಶೈನಿಂಗ್‌ ಸ್ಟಾರ್‌ ಬಳಿ ಇರುವ ಕಾರುಗಳ ಸಂಗ್ರಹದ ಬಗ್ಗೆ ಕೇಳಿದ್ರಂತೂ ಅಭಿಮಾನಿಗಳು ದಂಗಾಗಿ ಹೋಗ್ತಾರೆ.

ಕೋಟ್ಯಂತರ ರೂಪಾಯಿ ಬೆಲೆಬಾಳುವ ಕಾರುಗಳು, ಖಾಸಗಿ ಜೆಟ್‌ ಹೀಗೆ ಐಷಾರಾಮಿ ವಾಹನಗಳಿಗೆ ಒಡೆಯ ಅಲ್ಲು ಅರ್ಜುನ್.‌ ಪುಷ್ಪ ರಾಜ್‌ ಪಾತ್ರದಲ್ಲಿ ತಮ್ಮ ವ್ಯಾನನ್ನು ಅಲ್ಲು ಅರ್ಜುನ್‌ ಅತಿಯಾಗಿ ಪ್ರೀತಿಸ್ತಾರೆ. ಅದೇ ರೀತಿ ನಿಜ ಜೀವನದಲ್ಲೂ ಕಾರುಗಳೆಂದ್ರೆ ಅವರಿಗೆ ಅಚ್ಚು ಮೆಚ್ಚು. ಶೈನಿಂಗ್‌ ಸ್ಟಾರ್‌ ಬಳಿ ಇರುವ ದುಬಾರಿ ಕಾರುಗಳು ಯಾವ್ಯಾವುದು ಅಂತಾ ನೋಡೋಣ.

ಹಮ್ಮರ್‌ ಎಚ್2‌

ಅಲ್ಲು ಅರ್ಜುನ್ ಬಳಿಯಿರೋ ದೊಡ್ಡದಾದ ಹಾಗೂ ಐಷಾರಾಮಿ ಕಾರುಗಳಲ್ಲಿ ಹಮ್ಮರ್‌ ಎಚ್‌ 2 ಕೂಡ ಒಂದು. ಹಾಲಿವುಡ್ ಸ್ಟಾರ್‌ ಅರ್ನಾಲ್ಡ್ ಈ ಕಾರಿನ ಬಗ್ಗೆ ಒಲವು ತೋರಿಸಿದಾಗಿನಿಂದ ಎಲ್ಲಾ ಸೆಲೆಬ್ರಿಟಿಗಳೂ ಇದನ್ನೇ ಆಯ್ಕೆ ಮಾಡಿಕೊಳ್ತಿದ್ದಾರೆ. ಆರಂಭದಲ್ಲಿ ಸೈನ್ಯಕ್ಕಾಗಿ ನಿರ್ಮಿಸಲಾದ ವಾಹನ ಇದಾಗಿತ್ತು. ಹಾಗಾಗಿ ರಫ್‌ ರೋಡಿನಲ್ಲೂ ಆರಾಮಾಗಿ ಓಡಬಲ್ಲದು. ಗಂಟೆಗೆ 190 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಇದರ ಬೆಲೆ 75 ಲಕ್ಷ ರೂಪಾಯಿ. ರೇಂಜ್‌ ರೋವರ್‌ ವೋಗ್‌ ಈ ಕಾರಿಗೆ ಅಲ್ಲು ಅರ್ಜುನ್ ಪ್ರೀತಿಯಿಂದ ಬೀಸ್ಟ್‌ ಎಂದು ಹೆಸರಿಟ್ಟಿದ್ದಾರೆ. ಇತ್ತೀಚೆಗೆ ಟ್ರಾಫಿಕ್‌ ನಿಯಮ ಉಲ್ಲಂಘಿಸಿದ್ದಕ್ಕೆ ಈ ಕಾರು ಸುದ್ದಿಯಲ್ಲಿತ್ತು. ರೇಂಜ್‌ ರೋವರ್‌ ವೋಗ್‌ ಎಸ್‌ಯುವಿ ಕೂಡ ಅಲ್ಲು ಅರ್ಜುನ್‌ ವರ್ಚಸ್ಸಿಗೆ ಸಿಕ್ಕಾಪಟ್ಟೆ ಸೂಟ್‌ ಆಗುವಂತಿದೆ. ಇದರ ಬೆಲೆ ಸುಮಾರು 2.5 ಕೋಟಿ ರೂಪಾಯಿ. ಈ ಐಷಾರಾಮಿ SUV ಭಾರತದ ಅನೇಕ ಸೆಲೆಬ್ರಿಟಿಗಳ ನೆಚ್ಚಿನ ಕಾರು ಎನಿಸಿಕೊಂಡಿದೆ.

Jaguar XJL

ರೇಂಜ್ ರೋವರ್‌ ಮನೆಯಿಂದ್ಲೇ ಬಂದ ಮತ್ತೊಂದು ಅತಿಥಿ ಇದು. ಮಾಲೀಕರ ಅಭಿರುಚಿಗೆ ಅನುಗುಣವಾಗಿಯೇ ವಿನ್ಯಾಸ ಮಾಡಿರೋ ಸುಂದರ ಸೆಡಾನ್ ಇದು. ಒಳಭಾಗದಲ್ಲೂ ಅದರ ಲಕ್ಷುರಿತನದ ಅನುಭವ ಪ್ರಯಾಣಿಕರಿಗಾಗುತ್ತದೆ. ಭಾರತದಲ್ಲಿ ಈ ಕಾರಿನ ಬೆಲೆ 1.2 ಕೋಟಿ ರೂಪಾಯಿ.

Volvo XC90 Excellence

ಪುಷ್ಪಾ ಸ್ಟಾರ್‌ ಅಲ್ಲು ಅರ್ಜುನ್‌ ಅವರ ಬಹು ನೆಚ್ಚಿನ ಕಾರುಗಳಲ್ಲಿ ಇದೂ ಒಂದು. ಅಲ್ಲು ಅರ್ಜುನ್ ಬಳಿಯಿರೋ ವೋಲ್ವೋ ಕಾರಿನಲ್ಲಿ ಸನ್‌ ರೂಫ್‌ ಕೂಡ ಇದೆ. ಅಲ್ಲಿಂದ್ಲೇ ಅಭಿಮಾನಿಗಳತ್ತ ಅವರು ಕೈಬೀಸಬಹುದು. ಕೇವಲ  ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿಮೀ ವೇಗಕ್ಕೆ ತಲುಪಬಲ್ಲ ಸಾಮರ್ಥ್ಯ ಈ ಕಾರಿಗಿದೆ. ಈ ಕಾರಿನ ಬೆಲೆ ಸುಮಾರು 1.30 ರಿಂದ 1.35 ಕೋಟಿ ರೂಪಾಯಿ.

Falcon Vanity Van

ಸೆಲೆಬ್ರಿಟಿಗಳಿಗೆ ಈಗ ವ್ಯಾನಿಟಿ ವ್ಯಾನ್‌ ಬೇಕೇ ಬೇಕು. ಶೂಟಿಂಗ್‌ ಮಧ್ಯೆ ಬಿಡುವಿದ್ದಾಗ ಆರಾಮಾಗಿ ಕಾಲ ಕಳೆಯಲು ಅಲ್ಲು ಅರ್ಜುನ್‌ ಕೂಡ ಐಷಾರಾಮಿ ವ್ಯಾನಿಟಿ ವ್ಯಾನ್‌ ಖರೀದಿಸಿದ್ದಾರೆ. ಅಲ್ಲು ಅರ್ಜುನ್ ಫಾಲ್ಕನ್ ಎಂಬ ಜೆಟ್-ಬ್ಲ್ಯಾಕ್ ವ್ಯಾನಿಟಿ ವ್ಯಾನ್ ಇದೆ. ಇದನ್ನು ಅಲ್ಲು ಅರ್ಜುನ್‌ ಗಾಗಿಯೇ ವಿಶೇಷವಾಗಿ ಅಲಂಕರಿಸಲಾಗಿದೆ. ಬೇಕಾದ ವ್ಯವಸ್ಥೆಗಳನ್ನು ಮಾಡಲಾಗಿದೆ. ಇದರ ಬೆಲೆ ಸುಮಾರು 7 ಕೋಟಿ ರೂಪಾಯಿ.

Volvo XC90
From swanky cars to an upgraded vanity van, Allu Arjun owns these luxurious  vehicles (PHOTOS) | The Times of India

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...