alex Certify ಬರೋಬ್ಬರಿ 82.75 ಲಕ್ಷ ರೂಪಾಯಿ ಹವಾಲಾ ಹಣ ವಶಕ್ಕೆ ಪಡೆದ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 82.75 ಲಕ್ಷ ರೂಪಾಯಿ ಹವಾಲಾ ಹಣ ವಶಕ್ಕೆ ಪಡೆದ ಪೊಲೀಸರು

ಧಾರವಾಡ: ಮಹಾನಗರ ಪಾಲಿಕೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಈ ನಡುವೆ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಹಣದ ಹೊಳೆಯನ್ನೇ ಹರಿಸಿರುವ ಆರೋಪ ಕೇಳಿಬಂದಿದೆ. ಈ ನಡುವೆ ಅಕ್ರವಾಗಿ ಸಾಗಿಸುತ್ತಿದ್ದ ಬರೋಬ್ಬರಿ 82.75 ಲಕ್ಷ ರೂಪಾಯಿ ಹವಾಲಾ ಹಣವನ್ನು ಅವಳಿ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರ ಪಾಲಿಕೆ ಚುನಾವಣೆ ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು ಜೋರಾಗಿದ್ದು, ಇದೇ ವೇಳೆ ಅಕ್ರಮವಾಗಿ ಸಾಗಿಸುತ್ತಿದ್ದ 82.75 ಲಕ್ಷ ರೂಪಾಯಿಯನ್ನು ಕೇಶ್ವಾಪುರ ಠಾಣೆ ಪೊಲೀಸರು ವಶಕ್ಕೆ ಪಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

BIG NEWS: ನವೆಂಬರ್ ಒಳಗೆ ರಾಜ್ಯದ ಎಲ್ಲರಿಗೂ ಕೋವಿಡ್ ಲಸಿಕೆ; ಸಿಎಂ ಮಹತ್ವದ ಘೋಷಣೆ

ಇಲ್ಲಿನ ಕುಸಗಲ್ ರಸ್ತೆಯ ಆಕ್ಸ್ ಫರ್ಡ್ ಕಾಲೇಜು ಬಳಿ ಹುಬ್ಬಳ್ಳಿ ನಗರಕ್ಕೆ ಬರುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರನ್ನು ತಡೆದು ಪರಿಶೀಲಿಸಿದಾಗ ಅಕ್ರಮ ಹಣ ಪತ್ತೆಯಾಗಿದೆ. ದಾಖಲೆಗಳಿಲ್ಲದೇ ಹಣ ಸಾಗಾಟ ಮಾಡಲಾಗುತ್ತಿದ್ದು, ರಾಜಸ್ಥಾನ ಮೂಲದ ಸದ್ಯ ಬಾಗಲಕೋಟೆಯಲ್ಲಿ ವಾಸವಾಗಿದ್ದ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...