ನೀವೇನಾದ್ರೂ ಮುಖ್ಯ ಕೆಲಸದಲ್ಲಿದ್ದಾಗ ಫೋನ್ ಕರೆ ಕೇಳಿ ಓಡೋಡಿ ಬರುತ್ತೀರಾ ಅಲ್ವಾ..? ಒಂದು ವೇಳೆ ಅದು ಕಂಪನಿ ಕರೆ ಅಥವಾ ತಪ್ಪಾದ ಕರೆ ಬಂದ್ರೆ ಮೈಯೆಲ್ಲಾ ಉರಿಯುವಷ್ಟು ಕೋಪ ಬರುತ್ತದೆ. ಆದರೆ, ಇಲ್ಲೊಬ್ಬಳಿಗೆ ಬರೋಬ್ಬರಿ 4,500 ಮಿಸ್ಡ್ ಕಾಲ್ ಬಂದಿದೆ. ಹಾಗಿದ್ದರೆ ಆಕೆಯ ಪರಿಸ್ಥಿತಿ ಹೇಗಾಗಿರಬಹುದು ಹೇಳಿ..?
ಹೌದು, ಯುಕೆ ಮೂಲದ ಮಹಿಳೆಯೊಬ್ಬರ ಫೋನ್ ಸಂಖ್ಯೆಯನ್ನು ಸಹಾಯವಾಣಿ ಎಂದು ತಪ್ಪಾಗಿ ಗ್ರಹಿಸಿದ ನಂತರ 4,500 ಮಿಸ್ಡ್ ಕಾಲ್‌ಗಳು ಬಂದಿವೆ. ಜನರು ತಮ್ಮ ಉಳಿದ ಪ್ರಿಪೇಯ್ಡ್ ಕಾರ್ಡ್‌ಗಳನ್ನು ಗಡುವಿನ ಮೊದಲು ಖರ್ಚು ಮಾಡಲು ನೆನಪಿಸುವ ಇಮೇಲ್ ಅನ್ನು ಕಳುಹಿಸಿದ ನಂತರ ಹೆಲೆನ್ ಮೆಕ್‌ಮೋಹನ್ ಎಂಬ ಮಹಿಳೆಗೆ ಕರೆಗಳ ಪ್ರವಾಹವೇ ಹರಿದುಬಂದಿದೆ.
ಆಕಸ್ಮಿಕವಾಗಿ ಇಮೇಲ್‌ನಲ್ಲಿ ಹೆಲೆನ್ ಅವರ ಸಂಖ್ಯೆಯನ್ನು ಪ್ರಕಟಿಸಲಾಗಿದೆ. ಫೋನ್ ಸಂಖ್ಯೆಯು ಒಂದೇ ಒಂದು ಅಂಕಿಯಿಂದ ತಪ್ಪಾಗಿದ್ದರಿಂದ ಈ ಘಟನೆ ಸಂಭವಿಸಿದೆ.
ಕರೆ ಮಾಡಿದ ಹೆಚ್ಚಿನ ಜನರು ತಮ್ಮ ಕಾರ್ಡ್‌ಗಳ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ಬಯಸಿದ್ದರೆ, ಇತರರು ಕಾರ್ಡ್‌ಗಳು ಕಳೆದುಹೋಗಿರುವ ಬಗ್ಗೆ ತಿಳಿಸಿದ್ದಾರೆ. ಇನ್ನು ಕರೆಗಳ ಸುರಿಮಳೆಯಾದ ನಂತರ ಆರ್ಥಿಕತೆಯ ಇಲಾಖೆಯು ಮಹಿಳೆ ಬಳಿ ಕ್ಷಮೆಯಾಚಿಸಿದೆ.