alex Certify ಬರಿಗಾಲಲ್ಲಿ ನಡೆಯುತ್ತಿದ್ದ ಬಡ ತಳ್ಳುಗಾಡಿಯವನಿಗೆ ಚಪ್ಪಲಿ ಕೊಡಿಸಿ ಮಾನವೀಯತೆ ಮೆರೆದ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರಿಗಾಲಲ್ಲಿ ನಡೆಯುತ್ತಿದ್ದ ಬಡ ತಳ್ಳುಗಾಡಿಯವನಿಗೆ ಚಪ್ಪಲಿ ಕೊಡಿಸಿ ಮಾನವೀಯತೆ ಮೆರೆದ ಪೊಲೀಸ್

ಪೊಲೀಸರೆಂದರೆ ಕಠೋರವಾದಿಗಳು, ದರ್ಪ ಅವರಲ್ಲಿ ಮನೆ ಮಾಡಿರುತ್ತದೆ ಎಂಬ ಮಾತುಗಳು ಬಹಳ ದಶಕಗಳಿಂದಲೂ ಕೇಳಿ ಬರುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಪೊಲೀಸರಲ್ಲಿದ್ದ ಆ ಕಠೋರತೆ, ದರ್ಪ, ಕೋಪ-ತಾಪಗಳು ಕಡಿಮೆಯಾಗಿ ಮಾನವೀಯತೆ ಮನೆ ಮಾಡುತ್ತಿರುವುದು ಸಂತಸದ ವಿಚಾರವಾಗಿದೆ.

ಪೊಲೀಸರು ಬಡವರು, ದೀನ ದಲಿತರ ನೆರವಿಗೆ ನಿಲ್ಲುವ ಮೂಲಕ ಮಾನವೀಯತೆ ಮೆರೆಯುತ್ತಿರುವ ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ. ಇಂತಹ ಅಃತಕರಣದ ಪ್ರಕರಣಗಳ ಪಟ್ಟಿಗೆ ಉತ್ತರ ಪ್ರದೇಶದ ಪೊಲೀಸರು ಸೇರ್ಪಡೆಯಾಗಿದ್ದಾರೆ.

ಕರ್ತವ್ಯ ನಿರತ ಪೊಲೀಸ್ ಶಿವಾಂಗ್ ಶೇಖರ್ ಗೋಸ್ವಾಮಿಯವರ ಕಣ್ಣಿಗೆ ರಸ್ತೆಯಲ್ಲಿ ಬರಿಗಾಲಿನಲ್ಲಿ ತಳ್ಳು ಗಾಡಿಯನ್ನು ತಳ್ಳಿಕೊಂಡು ಹೋಗುತ್ತಿದ್ದ ಬಡ ವ್ಯಕ್ತಿಯನ್ನು ಗಮನಿಸಿದ್ದಾರೆ. ಆತನ ಜೀವನ ಪರಿಸ್ಥಿತಿಯ ಬಗ್ಗೆ ವಿಚಾರಿಸಿದ ಗೋಸ್ವಾಮಿ, ಆ ವ್ಯಕ್ತಿಯನ್ನು ಅಂಗಡಿಗೆ ಕರೆದೊಯ್ದು ಹೊಚ್ಚ ಹೊಸ ಚಪ್ಪಲಿಯನ್ನು ಕೊಡಿಸಿದ್ದಾರೆ.

ಈ ದೃಶ್ಯಾವಳಿಗಳ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, 2 ಲಕ್ಷಕ್ಕೂ ಅಧಿಕ ಜನರು ಇದನ್ನು ವೀಕ್ಷಿಸಿ ಗೋಸ್ವಾಮಿಯವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಆ ವ್ಯಕ್ತಿಯು ಚಪ್ಪಲಿ ಕೊಡಿಸಿದ ಪೊಲೀಸ್ ಪೇದೆ ಗೋಸ್ವಾಮಿಯವರಿಗೆ ಕೈಮುಗಿದು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಈ ಒಂದು ಅಃತಕರಣದ ಕೆಲಸವನ್ನು ಮಾಡಿದ ಪೊಲೀಸ್ ಕೇವಲ ಇತರೆ ಪೊಲೀಸರಿಗಷ್ಟೇ ಅಲ್ಲ, ಅಸಂಖ್ಯಾತ ಜನರಿಗೆ ಪ್ರೇರಣೆಯಾಗಿದ್ದಾರೆ ಎಂದು ನೆಟ್ಟಿಗರು ಮೆಚ್ಚುಗೆಯ ಕಮೆಂಟ್ ಮಾಡಿದ್ದಾರೆ.

— शिवांग शेखर गोस्वामी 🇮🇳 (@upcopshivang) July 1, 2022

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...