alex Certify ಬರಗಾಲದಿಂದಾಗಿ 30 ವರ್ಷಗಳ ನಂತರ ಮೇಲಕ್ಕೆ ಬಂತು ನೀರೊಳಗಿದ್ದ ಗ್ರಾಮ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರಗಾಲದಿಂದಾಗಿ 30 ವರ್ಷಗಳ ನಂತರ ಮೇಲಕ್ಕೆ ಬಂತು ನೀರೊಳಗಿದ್ದ ಗ್ರಾಮ…..!

ತೀವ್ರ ಬರಗಾಲದಿಂದಾಗಿ 30 ವರ್ಷಗಳ ಕಾಲ ನೀರೊಳಗಿದ್ದ ಗ್ರಾಮವೊಂದು ಮೇಲೆದ್ದಿದೆ. ಅಣೆಕಟ್ಟಿನಿಂದ ಮುಳುಗಿದ ಸ್ಪೇನ್‌ನ ಹಳ್ಳಿಯಲ್ಲಿ ಬರದಿಂದಾಗಿ ಆಲ್ಟೊ ಲಿಂಡೋಸೊ ಜಲಾಶಯ ಖಾಲಿಯಾಗಿದೆ. ಹೀಗಾಗಿ ನೀರೊಳಗಿದ್ದ ಗ್ರಾಮ ಮೇಲೆ ಬಂದಿದ್ದು, ಪ್ರವಾಸಿಗರನ್ನು ಆಕರ್ಷಿಸಿದೆ.

ಹೌದು, 1992ರಿಂದ ನೀರೊಳಗಿದ್ದ ಅಸೆರೆಡೊ ಗ್ರಾಮವು ಹೊರಹೊಮ್ಮಿದೆ. ಆದರೆ, ಈಗ ಶಿಥಿಲಾವಸ್ಥೆಯಲ್ಲಿರುವ ಗ್ರಾಮವನ್ನು ಕಂಡು ಸ್ಥಳೀಯರು ಭಾವುಕರಾಗಿದ್ದಾರೆ. ಸ್ಪ್ಯಾನಿಷ್-ಪೋರ್ಚುಗೀಸ್ ಗಡಿಯಲ್ಲಿನ ಈ ಅಣೆಕಟ್ಟು, ಬರದಿಂದಾಗಿ ಅವಶೇಷಗಳು ಹೊರಹೊಮ್ಮಿವೆ. ಪ್ರಸ್ತುತ, ಜಲಾಶಯವು ಕೇವಲ ಶೇ. 15ರಷ್ಟು ಮಾತ್ರ ಜಲಮಟ್ಟವನ್ನು ಹೊಂದಿದೆ.

ನೀರು ಕಡಿಮೆಯಾಗುತ್ತಿದ್ದಂತೆ ಅಸೆರೆಡೊ ಗ್ರಾಮದ ಹಳ್ಳಿಯು ಮತ್ತೊಮ್ಮೆ ಗೋಚರಿಸುವಂತೆ ಆಗಿದೆ. ಅವಶೇಷಗಳನ್ನು ನೋಡಲು ಈ ಪ್ರದೇಶಕ್ಕೆ ಭೇಟಿ ನೀಡಿದ ಜನರು, ಕುಸಿದ ಛಾವಣಿಗಳು, ಇಟ್ಟಿಗೆಗಳು ಮತ್ತು ಮರದ ಅವಶೇಷಗಳನ್ನು ಕಂಡು ಭಾವುಕರಾಗಿದ್ದಾರೆ. ಒಂದು ಕಾಲದಲ್ಲಿ ಈ ಪ್ರದೇಶವು ಉತ್ತಮ ಸ್ಥಿತಿಯಲ್ಲಿತ್ತು ಎಂದು ನೆನಪಿಸಿಕೊಂಡಿದ್ದಾರೆ.

ಘೋಸ್ಟ್ ಟೌನ್‌ನಲ್ಲಿರುವ ಕೆಫೆಯಲ್ಲಿ ಹಲವಾರು ಖಾಲಿ ಬಿಯರ್ ಬಾಟಲಿಗಳನ್ನು ಜೋಡಿಸಲಾಗಿತ್ತು. ಅರೆ ನಾಶವಾದ ಹಳೆಯ ಕಾರುಗಳು ಮುಂತಾದವುಗಳನ್ನು ಸ್ಥಳೀಯರು ಗುರುತಿಸಿದ್ದಾರೆ. 1992 ಕ್ಕಿಂತ ಮೊದಲು ಇಡೀ ಪ್ರದೇಶವು ದ್ರಾಕ್ಷಿತೋಟಗಳು, ಕಿತ್ತಳೆ ಮರಗಳಿಂದ ತುಂಬಿ ತುಳುಕಿತ್ತು ಎಂದು 72 ವರ್ಷದ ವೃದ್ಧರೊಬ್ಬರು ನೆನಪಿಸಿಕೊಂಡಿದ್ದಾರೆ.

ಹಳ್ಳಿಯ ಫೋಟೋಗಳು ಮತ್ತು ಡ್ರೋನ್ ವಿಡಿಯೋಗಳು ಈಗ ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ.

— CGTN Europe (@CGTNEurope) February 12, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...