alex Certify ಬಡ ಕಡಲೆಕಾಯಿ ವ್ಯಾಪಾರಿಗೆ ಮೋಸ ಮಾಡಲು ಹೋಗಿ ಬೇಸ್ತುಬಿದ್ದ ಗ್ರಾಹಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಡ ಕಡಲೆಕಾಯಿ ವ್ಯಾಪಾರಿಗೆ ಮೋಸ ಮಾಡಲು ಹೋಗಿ ಬೇಸ್ತುಬಿದ್ದ ಗ್ರಾಹಕ

ಮೋಸ ಹೋಗುವವರು ಇರೋವರೆಗೂ ಮೋಸ ಮಾಡುವವರು ಇರುತ್ತಾರೆ ಎಂಬ ಗಾದೆ ಮಾತಿದೆ. ಹಾಗೆಯೇ ಮೋಸಕ್ಕೆ ಮೋಸದಿಂದಲೇ ಉತ್ತರ ಕೊಡಬೇಕೆಂದು ಕೆಲವು ಜನರ ನಂಬಿಕೆಯಾಗಿದೆ. ಇಂಥದ್ದೆ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಜನರು ಮುಸಿಮುಸಿ ನಕ್ಕಿದ್ದಾರೆ.

ವ್ಯಕ್ತಿಯೊಬ್ಬ ಮಾರಾಟಗಾರರಿಂದ ಕಡಲೆಕಾಯಿ ಖರೀದಿಸಲು ರಸ್ತೆಯ ಬದಿಯಲ್ಲಿ ಕುಳಿತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಮಾರಾಟಗಾರ ಕಡಲೆಕಾಯಿಯನ್ನು ತೂಕಕ್ಕೆ ಹಾಕುತ್ತಿದ್ದರೆ, ಆ ವ್ಯಕ್ತಿ ಮಾರಾಟಗಾರನ ಗಮನಕ್ಕೆ ಬಾರದಂತೆ ಮೆಲ್ಲನೆ ಕಡಲೆಕಾಯಿಯನ್ನು ಕದ್ದು ಜೇಬಿಗೆ ಹಾಕಿಕೊಂಡಿದ್ದಾನೆ. ಕಡಲೆಕಾಯಿ ಮಾರಾಟ ಇವನಿಗಿಂತಲೂ ಚಾಲಾಕಿ ಮನುಷ್ಯ. ಆತ ಇವೆಲ್ಲವನ್ನೂ ಗಮನಿಸುತ್ತಿದ್ರೂ ತನಗೇನು ಗೊತ್ತಿಲ್ಲ ಎಂಬಂತೆ ಕುಳಿತಿದ್ದಾನೆ.

ವ್ಯಕ್ತಿಯ ಕೈಯಲ್ಲಿ ಕವರ್ ಕೊಟ್ಟು ಕಡಲೆಕಾಯಿಯನ್ನು ಮಾರಾಟಗಾರ ತುಂಬಿದ್ದಾನೆ. ಈ ವೇಳೆ ಆತನನ್ನು ಹಿಂದಕ್ಕೆ ನೋಡುವಂತೆ ಹೇಳಿದ ಮಾರಾಟಗಾರ ಬಹುತೇಕ ಕಡಲೆಕಾಯಿಯನ್ನು ಕವರ್ ಗೆ ಹಾಕದೆ ನೆಲಕ್ಕೆ ಚೆಲ್ಲಿದ್ದಾನೆ. ಇದು ಆ ಮೋಸ ಮಾಡಿದ ವ್ಯಕ್ತಿಗೆ ಗೊತ್ತಾಗಿಯೇ ಇಲ್ಲ. ನೋಡಿ….. ಇದಕ್ಕೆ ಹೇಳೋದು ಮೋಸ ಮಾಡಿದ್ರೆ, ಮಾಡಿದವರಿಗೆ ಅದಕ್ಕಿಂತಾ ದೊಡ್ಡ ಖೆಡ್ಡಾ  ಸಿದ್ಧವಾಗಿರುತ್ತದೆ ಅನ್ನೋದಂತೂ ಸುಳ್ಳಲ್ಲ.

ಸದ್ಯ, ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೋ ಭಾರಿ ವೈರಲ್ ಆಗಿದ್ದು, 4 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಹಲವರು ಈ ವಿಡಿಯೋವನ್ನು ಹಾಸ್ಯಮಯವಾಗಿ ಕಂಡಿದ್ದಾರೆ.

https://www.youtube.com/watch?v=2bm_4VEoFhM

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...