alex Certify ಬಡಮಕ್ಕಳಿಗೆ ಸಹಾಯ ಮಾಡದ ರಶ್ಮಿಕಾ ಮಂದಣ್ಣ, ಮತ್ತೆ ಟ್ರೋಲ್ ಆದ “ಪುಷ್ಪ”ಸುಂದರಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಡಮಕ್ಕಳಿಗೆ ಸಹಾಯ ಮಾಡದ ರಶ್ಮಿಕಾ ಮಂದಣ್ಣ, ಮತ್ತೆ ಟ್ರೋಲ್ ಆದ “ಪುಷ್ಪ”ಸುಂದರಿ..!

‘ಪುಷ್ಪಾ’ ಸುಂದರಿ ರಶ್ಮಿಕಾ ಒಂದಲ್ಲಾ ಒಂದು ವಿಷಯಗಳಿಂದ ಸುದ್ದಿಯಾಗುತ್ತಿರುತ್ತಾರೆ. ಸುದ್ದಿ ಅನ್ನೋದಕ್ಕಿಂತ ಟ್ರೋಲ್ ಆಗ್ತಿರ್ತಾರೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾಳ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋ ನೋಡಿರುವ ಜನರು ರಶ್ಮಿಕಾಗಳನ್ನ ಮತ್ತೆ ಟ್ರೋಲ್ ಮಾಡುತ್ತಿದ್ದಾರೆ.

ಸಧ್ಯ ಮುಂಬೈನಲ್ಲಿರುವ ರಶ್ಮಿಕಾ ಮಂದಣ್ಣ ರೆಸ್ಟೊರೆಂಟ್‌ನಿಂದ ಹೊರಬಂದಾಗ ಕೆಲವು ಬಡ ಮಕ್ಕಳು ಅವರನ್ನ ಸುತ್ತುವರೆದಿದ್ದಾರೆ. ಮೊದಲು ಬಂದ ಹುಡುಗಿ ರಶ್ಮಿಕಾ ಹತ್ರ ಹಣ ಕೇಳಿದ್ದಾಳೆ, ನಾನು ಹಣ ಕೊಡುತ್ತೇನೆ ಎಂದ ರಶ್ಮಿಕಾ ಸೀದಾ ಹೋಗಿ ಕಾರಿನಲ್ಲಿ ಕುಳಿತಿದ್ದಾರೆ. ಅವರ ಕಾರ್ ಬಳಿ ಓಡಿಬಂದ ಇನ್ನೊಬ್ಬ ಹುಡುಗಿ ನೀವು ಪುಷ್ಪಾ ಚಿತ್ರದ ಹೀರೋಯಿನ್ ಅಲ್ವಾ ಅಂತಾ ಕೇಳಿದ್ದಾರೆ. ಆಕೆಯ ಹಿಂದೆ ಬಂದ ಮತ್ತೊಬ್ಬಳು ಹುಡುಗಿ ಊಟ ತಿಂದಿಲ್ಲಾ ದಯವಿಟ್ಟು ದುಡ್ಡು ಕೊಡಿ ಎಂದರೂ ರಶ್ಮಿಕಾ ರಿಯಾಕ್ಟ್ ಮಾಡಿಲ್ಲ.

ರಶ್ಮಿಕಾ ಅವರನ್ನು ಸುತ್ತುವರೆದು ಬೇಡಿಕೊಂಡ ಮಕ್ಕಳಿಗೆ ಹಣ ನೀಡದೆ ಅಲ್ಲಿಂದ ತೆರಳಿದ್ದಾರೆ. ಈ ವಿಡಿಯೋವನ್ನ ಬಾಲಿವುಡ್ ಪೇಜ್ ಒಂದು ಪೋಸ್ಟ್ ಮಾಡಿದೆ. ಈ ವಿಡಿಯೋ ನೋಡಿದ ಕೆಲವರಿಗೆ ರಶ್ಮಿಕಾ ಅವರ ವರ್ತನೆ ಇಷ್ಟವಾಗದೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲು ಆರಂಭಿಸಿದ್ದಾರೆ.

ವಿಡಿಯೋದ ಕೆಳಗೆ ರಶ್ಮಿಕಾಳ ವರ್ತನೆ ವಿರೊಧಿಸಿ ಹಲವರು ಕಾಮೆಂಟ್ ಮಾಡಿದ್ದಾರೆ. ರಶ್ಮಿಕಾ ಹೃದಯದಿಂದ ಬಡ ವ್ಯಕ್ತಿ ಎಂದು ಒಬ್ಬರು ಬರೆದರೆ. ಇಂತವರ ಚಲನಚಿತ್ರಗಳನ್ನು ನೋಡುವುದನ್ನು ನಿಲ್ಲಿಸಬೇಕು ಎಂದು ಮತ್ತೊಬ್ಬರು ಬರೆದಿದ್ದಾರೆ‌. ಕನಿಷ್ಠ ನೂರು ರೂಪಾಯಿ ನೀಡಬಹುದಿತ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...