ಕೇಂದ್ರ ಸರ್ಕಾರ 2023-24ನೇ ಸಾಲಿನ ಬಜೆಟ್ ನಲ್ಲಿ ರಾಜ್ಯವಾರು ಕೇಂದ್ರೀಯ ತೆರಿಗೆ/ಸುಂಕ ಹಂಚಿಕೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಒಂದಾದ ಕರ್ನಾಟಕಕ್ಕೆ ಶೇಕಡಾ 3 ಅಂದರೆ ಕೇವಲ 37,252 ಕೋಟಿ ರೂಪಾಯಿ ನೀಡಲಾಗಿದೆ.
ಉತ್ತರ ಪ್ರದೇಶ ಸಿಂಹಪಾಲನ್ನು ಪಡೆದಿದ್ದು, ಆ ರಾಜ್ಯಕ್ಕೆ ಬರೋಬ್ಬರಿ 1.83 ಲಕ್ಷ ಕೋಟಿ ರೂಪಾಯಿಗಳನ್ನು ನೀಡಲಾಗಿದ್ದರೆ ಎರಡನೇ ಸ್ಥಾನದಲ್ಲಿರುವ ಬಿಹಾರಕ್ಕೆ 1.02 ಲಕ್ಷ ಕೋಟಿ ರೂಪಾಯಿಗಳನ್ನು ನೀಡಲಾಗಿದೆ.
ಇನ್ನುಳಿದಂತೆ ಮಧ್ಯಪ್ರದೇಶಕ್ಕೆ 80,000 ಕೋಟಿ ರೂಪಾಯಿ, ಪಶ್ಚಿಮ ಬಂಗಾಳಕ್ಕೆ 76,000 ಕೋಟಿ ರೂಪಾಯಿ, ಮಹಾರಾಷ್ಟ್ರಕ್ಕೆ 64,000 ಕೋಟಿ ರೂಪಾಯಿ, ತಮಿಳುನಾಡಿಗೆ 41.6 ಸಾವಿರ ಕೋಟಿ ರೂಪಾಯಿ, ಆಂಧ್ರಪ್ರದೇಶಕ್ಕೆ 41.3 ಸಾವಿರ ಕೋಟಿ ರೂಪಾಯಿ ನೀಡಲಾಗಿದೆ.
ಹಾಗೆಯೇ ಛತ್ತೀಸ್ಗಡಕ್ಕೆ 34 ಸಾವಿರ ಕೋಟಿ ರೂಪಾಯಿ, ಅಸ್ಸಾಂಗೆ 31 ಸಾವಿರ ಕೋಟಿ ರೂಪಾಯಿ, ಗುಜರಾತಿಗೆ 35 ಸಾವಿರ ಕೋಟಿ ರೂಪಾಯಿ, ಜಾರ್ಖಂಡ್ ಗೆ 33 ಸಾವಿರ ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ.