alex Certify ಬಂಧನದ ಬಳಿಕ ಬಯಲಾಯ್ತು ಕೂಲಿಕಾರ್ಮಿಕ ‘ಕೋಟ್ಯಾಧಿಪತಿ’ ಯಾದ ರಹಸ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಂಧನದ ಬಳಿಕ ಬಯಲಾಯ್ತು ಕೂಲಿಕಾರ್ಮಿಕ ‘ಕೋಟ್ಯಾಧಿಪತಿ’ ಯಾದ ರಹಸ್ಯ

ಕೂಲಿ ಕೆಲಸಕ್ಕೆಂದು ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಬಂದಿದ್ದ ವ್ಯಕ್ತಿಯೊಬ್ಬ ಏಕಾಏಕಿ ಕೋಟ್ಯಾಧಿಪತಿಯಾಗಿದ್ದು, ಇದರ ರಹಸ್ಯ ಬೆನ್ನತ್ತಿದ ಪೊಲೀಸರು ಆತನನ್ನು ಬಂಧಿಸಿದ ಬಳಿಕ ಅಸಲಿ ಕಥೆ ಬಯಲಾಗಿದೆ.

ಇಂಥದೊಂದು ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯಲ್ಲಿ ನಡೆದಿದ್ದು, ಆಂಧ್ರದ ಲೇಪಾಕ್ಷಿ ಮೂಲದ ಕೋಟೇಶ್ವರ ರಾವ್, ಕ್ವಾರಿ ಒಂದರಲ್ಲಿ ಕೆಲಸ ಮಾಡಲು ಈ ಹಿಂದೆ ಇಲ್ಲಿಗೆ ಬಂದಿದ್ದ. ಆದರೆ ಈತ ಅಲ್ಪ ಅವಧಿಯಲ್ಲೇ ದೊಡ್ಡ ದೊಡ್ಡ ಬಂಗಲೆಗಳನ್ನು ಕಟ್ಟಿಸಿದ್ದಲ್ಲದೆ, ಕಲ್ಯಾಣ ಮಂಟಪವೊಂದರ ನಿರ್ಮಾಣಕ್ಕೂ ಮುಂದಾಗಿದ್ದ.

ಆಗಲೇ ಬಾಗೇಪಲ್ಲಿ ಪೊಲೀಸರಿಗೆ ಒಂದಷ್ಟು ಅನುಮಾನ ಬಂದಿದೆ. ಹೀಗಾಗಿ ಅವನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈತ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ನಕಲಿ ಗಣಿ ಪರ್ಮಿಟ್ ಲೈಸೆನ್ಸ್ ತಯಾರಿ ಮಾಡುತ್ತಿದ್ದ ಅಂಶ ಬಯಲಾಗಿದೆ. ಈ ಮೂಲಕ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳ ನಕಲಿ ಪರವಾನಿಗೆ ಮೂಲಕ ಕೋಟಿ ಕೋಟಿ ಸಂಪಾದನೆ ಮಾಡಿದ್ದ ಎನ್ನಲಾಗಿದೆ.

ಇದೀಗ ಪೊಲೀಸರು ಈತನ ಮನೆ ಮೇಲೆ ದಾಳಿ ನಡೆಸಿ ಅಕ್ರಮವಾಗಿ ತಯಾರಿಸಿದ ನಕಲಿ ಪರವಾನಿಗೆ ಪತ್ರಗಳು ಹಾಗೂ ಇದರ ತಯಾರಿಗೆ ಬಳಸುತ್ತಿದ್ದ ಕಂಪ್ಯೂಟರ್, ಪ್ರಿಂಟರ್ ಹಾಗೂ ಹಾಲೋಗ್ರಾಂ ತಯಾರಿಕಾ ಯಂತ್ರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...