alex Certify ಬಂಗಾಳಿ ಸಂಪ್ರದಾಯದಂತೆ ಕೋಲ್ಕತ್ತಾದಲ್ಲಿ ವಿವಾಹವಾದ ರಣಬೀರ್-ಆಲಿಯಾ; ಇದರಲ್ಲಿದೆ ಒಂದು ಟ್ವಿಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಂಗಾಳಿ ಸಂಪ್ರದಾಯದಂತೆ ಕೋಲ್ಕತ್ತಾದಲ್ಲಿ ವಿವಾಹವಾದ ರಣಬೀರ್-ಆಲಿಯಾ; ಇದರಲ್ಲಿದೆ ಒಂದು ಟ್ವಿಸ್ಟ್

ಬಾಲಿವುಡ್ ತಾರೆಯರಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಬಂಗಾಳಿ ಸಂಪ್ರದಾಯದಂತೆ ಕೋಲ್ಕತ್ತಾದಲ್ಲಿ ಮದುವೆಯಾಗಿದ್ದಾರೆ..! ಅರೆ ಇದೇನಿದು..? ನಿನ್ನೆಯಷ್ಟೇ ಈ ಜೋಡಿ ಮುಂಬೈನಲ್ಲಿ ಪಂಜಾಬಿ ಸಂಪ್ರದಾಯದಂತೆ ವಿವಾಹವಾದರಲ್ವಾ ಅಂತಾ ಅಚ್ಚರಿ ಪಡುತ್ತೀದ್ದೀರಾ..? ಹಾಗಿದ್ರೆ, ಖಂಡಿತಾ ನೀವು ಈ ಸ್ಟೋರಿ ಓದಲೇಬೇಕು..

ಹೌದು, ರಣಬೀರ್ ಮತ್ತು ಆಲಿಯಾ ಮದುವೆ ಕೋಲ್ಕತ್ತಾದಲ್ಲಿ ನೆರವೇರಿದೆ. ಕೋಲ್ಕತ್ತಾದಲ್ಲಿ ಈ ನವಜೋಡಿಯ ಅಭಿಮಾನಿಗಳು ರಣಬೀರ್-ಆಲಿಯಾರ ಎರಡು ಪ್ರತಿಮೆಗಳನ್ನು ನಿರ್ಮಿಸಿದ್ದಾರೆ. ಈ ಪ್ರತಿಮೆಗಳನ್ನು ಬಂಗಾಳಿ ವಿವಾಹ ಸಂಪ್ರದಾಯದಂತೆ ಸಿಂಗರಿಸಲಾಗಿದೆ.

ಗೊಂಬೆಗಳನ್ನು ಮತ್ತಷ್ಟು ನೈಜವಾಗಿ ಕಾಣುವಂತೆ ಮಾಡಲು ಅವರು ರಣಬೀರ್ ಮತ್ತು ಆಲಿಯಾ ಅವರ ಮುಖದ ಕಟೌಟ್‌ಗಳೊಂದಿಗೆ ಪ್ರತಿಮೆಗಳನ್ನು ಮುಚ್ಚಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ಈ ವಿವಾಹವು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಆಲಿಯಾ ಅವರ ಪ್ರತಿಮೆಯು ಚಿನ್ನದ ಆಭರಣಗಳೊಂದಿಗೆ ಕೆಂಪು ಸೀರೆಯಿಂದ ಸಿಂಗರಿಸಿದ್ದರು. ಬಂಗಾಳಿ ವಧುವಿನ ವಿಶಿಷ್ಟವಾದ ಶಾಖಾ ಪೋಲಾವನ್ನು ಧರಿಸಿದ್ದರು. ರಣಬೀರ್ ಅವರ ಗೊಂಬೆಯು ಧೋತಿ-ಕುರ್ತಾ ಮತ್ತು ಟೋಪೋರ್ ಅನ್ನು ಧರಿಸಿತ್ತು. ವರ ಆಕರ್ಷಕ ಮೆರವಣಿಗೆ ಮುಖಾಂತರ ವಿವಾಹ ಮಂಟಪಕ್ಕೆ ಆಗಮಿಸಿದ್ದ. ಬಂಗಾಳಿ ಸಂಪ್ರದಾಯದಂತೆ ಈ ಜೋಡಿಗಳಿಗೆ ವಿವಾಹ ನೆರವೇರಿಸಲಾಗಿದೆ.

ಕ್ರೇಜಿ ರಾಲಿಯಾ ಅಭಿಮಾನಿಗಳಿಂದಾಗಿ ಕೋಲ್ಕತ್ತಾ ಹಿಂದೆಂದೂ ನೋಡಿರದ ಈ ಮದುವೆಗೆ ಸಾಕ್ಷಿಯಾಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...