
ಹೌದು, ರಣಬೀರ್ ಮತ್ತು ಆಲಿಯಾ ಮದುವೆ ಕೋಲ್ಕತ್ತಾದಲ್ಲಿ ನೆರವೇರಿದೆ. ಕೋಲ್ಕತ್ತಾದಲ್ಲಿ ಈ ನವಜೋಡಿಯ ಅಭಿಮಾನಿಗಳು ರಣಬೀರ್-ಆಲಿಯಾರ ಎರಡು ಪ್ರತಿಮೆಗಳನ್ನು ನಿರ್ಮಿಸಿದ್ದಾರೆ. ಈ ಪ್ರತಿಮೆಗಳನ್ನು ಬಂಗಾಳಿ ವಿವಾಹ ಸಂಪ್ರದಾಯದಂತೆ ಸಿಂಗರಿಸಲಾಗಿದೆ.
ಗೊಂಬೆಗಳನ್ನು ಮತ್ತಷ್ಟು ನೈಜವಾಗಿ ಕಾಣುವಂತೆ ಮಾಡಲು ಅವರು ರಣಬೀರ್ ಮತ್ತು ಆಲಿಯಾ ಅವರ ಮುಖದ ಕಟೌಟ್‌ಗಳೊಂದಿಗೆ ಪ್ರತಿಮೆಗಳನ್ನು ಮುಚ್ಚಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ಈ ವಿವಾಹವು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಗಮನ ಸೆಳೆದಿದೆ.
ಆಲಿಯಾ ಅವರ ಪ್ರತಿಮೆಯು ಚಿನ್ನದ ಆಭರಣಗಳೊಂದಿಗೆ ಕೆಂಪು ಸೀರೆಯಿಂದ ಸಿಂಗರಿಸಿದ್ದರು. ಬಂಗಾಳಿ ವಧುವಿನ ವಿಶಿಷ್ಟವಾದ ಶಾಖಾ ಪೋಲಾವನ್ನು ಧರಿಸಿದ್ದರು. ರಣಬೀರ್ ಅವರ ಗೊಂಬೆಯು ಧೋತಿ-ಕುರ್ತಾ ಮತ್ತು ಟೋಪೋರ್ ಅನ್ನು ಧರಿಸಿತ್ತು. ವರ ಆಕರ್ಷಕ ಮೆರವಣಿಗೆ ಮುಖಾಂತರ ವಿವಾಹ ಮಂಟಪಕ್ಕೆ ಆಗಮಿಸಿದ್ದ. ಬಂಗಾಳಿ ಸಂಪ್ರದಾಯದಂತೆ ಈ ಜೋಡಿಗಳಿಗೆ ವಿವಾಹ ನೆರವೇರಿಸಲಾಗಿದೆ.
ಕ್ರೇಜಿ ರಾಲಿಯಾ ಅಭಿಮಾನಿಗಳಿಂದಾಗಿ ಕೋಲ್ಕತ್ತಾ ಹಿಂದೆಂದೂ ನೋಡಿರದ ಈ ಮದುವೆಗೆ ಸಾಕ್ಷಿಯಾಯಿತು.