ಬಂಗಾರದ ಆಭರಣಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಜಾಸ್ತಿ ಅಲ್ಲದಿದ್ದರೂ ಅಲ್ಪಸ್ವಲ್ಪವಾದರೂ ಆಭರಣ ಮಾಡಿಸಿಟ್ಟುಕೊಂಡಿರುತ್ತೇವೆ.
ದಿನನಿತ್ಯದ ಬಳಕೆಗೆಂದೋ ಅಥವಾ ಫಂಕ್ಷನ್ ಗೆಂದು ಆಭರಣ ಧರಿಸುತ್ತೇವೆ. ಬೆವರು, ಮತ್ತಿತರ ಧೂಳುಗಳಿಂದ ಅದರ ಹೊಳಪು ಮಸುಕಾಗಿರುತ್ತದೆ. ಈ ಚಿನ್ನದ ಆಭರಣಗಳನ್ನು ಸುಲಭವಾಗಿ ಸ್ವಚ್ಛಗೊಳಿಸುವ ವಿಧಾನ ಇಲ್ಲಿದೆ ನೋಡಿ.
ಒಂದು ಅಗಲವಾದ ಬೌಲ್ ಗೆ 1 ಗ್ಲಾಸ್ ಉಗುರು ಬೆಚ್ಚಗಿನ ನೀರು ಹಾಕಿ 1 ಚಮಚದಷ್ಟು ಶಾಂಪೂ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ½ ಟೀ ಸ್ಪೂನ್ ಅರಿಶಿನದ ಪುಡಿ ಹಾಕಿ ಮಿಕ್ಸ್ ಮಾಡಿ ಚಿನ್ನದ ಆಭರಣಗಳನ್ನು ಹಾಕಿ ½ ಗಂಟೆಗಳ ಕಾಲ ಹಾಗೇ ಬಿಡಿ. ನಂತರ ಒಂದು ಟೂಥ್ ಬ್ರೆಷ್ ನ ಸಹಾಯದಿಂದ ತಿಕ್ಕಿ. ಆಮೇಲೆ ಬೇರೆ ನೀರಿನಲ್ಲಿ ಮತ್ತೊಮ್ಮೆ ತೊಳೆದು ಒಂದು ಹತ್ತಿ ಬಟ್ಟೆಯ ಸಹಾಯದಿಂದ ಇದರ ನೀರಿನ ಪಸೆ ಒರೆಸಿದರೆ ಚಿನ್ನ ಹೊಳೆಯುತ್ತದೆ.