
ಒಮ್ಮೆ ಮಾಡಿಟ್ಟ ಚಹಾವನ್ನು ಮತ್ತೆ ಬಿಸಿ ಮಾಡಿ ಕುಡಿಯುತ್ತೀರಾ, ಇದರಿಂದ ಆರೋಗ್ಯದ ಮೇಲೆ ಎಷ್ಟೆಲ್ಲಾ ದುಷ್ಪರಿಣಾಮಗಳಾಗುತ್ತವೆ ಎಂಬುದು ನಿಮಗೆ ಗೊತ್ತೇ?
ಒಮ್ಮೆ ತಯಾರಿಸಿದಾಗ ಹೆಚ್ಚಾಗಿ ಉಳಿದ ಚಹಾವನ್ನು ಎಸೆಯುವ ಬದಲು ಮತ್ತೆ ಬಿಸಿ ಮಾಡಿ ಕುಡಿಯುತ್ತೀರಾ, ಹೀಗೆ ಮಾಡುವುದರಿಂದ ಚಹಾದ ರುಚಿ, ಬಣ್ಣ, ಪೌಷ್ಟಿಕಾಂಶ ಮತ್ತು ಅದರ ಸುವಾಸನೆ ಹಾಳಾಗುತ್ತದೆ. ಇದು ಸೇವನೆಗೆ ಯೋಗ್ಯವೂ ಆಗಿರುವುದಿಲ್ಲ.
ಮತ್ತೆ ಬಿಸಿ ಮಾಡಿದ ಚಹಾ ಹೆಚ್ಚು ಬ್ಯಾಕ್ಟೀರಿಯಗಳನ್ನು ಒಳಗೊಂಡಿರುತ್ತದೆ ಮತ್ತು ಚಹಾದ ಪ್ರಯೋಜನಕಾರಿ ಅಂಶಗಳು ಸಂಪೂರ್ಣ ನಾಶವಾಗುತ್ತದೆ. ಚಹಾವನ್ನು ಹಾಲು ಮತ್ತು ಸಕ್ಕರೆ ಬೆರೆಸಿ ಕುದಿಸಬಾರದು. ಸೊಪ್ಪು ಅಥವಾ ಚಹಾ ಪುಡಿಯನ್ನು ಬಿಸಿ ನೀರಿಗೆ ಹಾಕಿ ನಾಲ್ಕು ನಿಮಿಷ ಕುದಿದ ಬಳಿಕ ಸೋಸಿ ಬಳಿಕ ಬೆಚ್ಚಗಿನ ಹಾಲು ಮತ್ತು ಸಕ್ಕರೆ ಸೇರಿಸಬೇಕು.
ಹೀಗೆ ಮಾಡಿದರೆ ಮಾತ್ರ ಚಹಾದ ಆರೋಗ್ಯಕಾರಕ ಅಂಶಗಳು ನಿಮ್ಮ ದೇಹಕ್ಕೆ ಲಭ್ಯವಾಗುತ್ತವೆ. ಮತ್ತೆ ಬಿಸಿ ಮಾಡಿ ಕುಡಿದ ಚಹಾದಿಂದ ತಲೆನೋವು, ಬೇಧಿಯಂಥ ಸಮಸ್ಯೆಗಳು ಕಂಡು ಬಂದಾವು. ಇವು ವಿಷಕಾರಿಯಾಗಿಯೂ ಬದಲಾಗುವುದರಿಂದ ಉಳಿದ ಚಹಾವನ್ನು ಹಾಗೆ ಕುಡಿಯಿರಿ ಅಥವಾ ಚೆಲ್ಲಿ. ಬಿಸಿ ಮಾಡಿ ಬಳಸದಿರಿ.