alex Certify ಫ್ರಿಡ್ಜ್ ನ ದುರ್ಗಂಧ ದೂರ ಮಾಡಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ರಿಡ್ಜ್ ನ ದುರ್ಗಂಧ ದೂರ ಮಾಡಲು ಇಲ್ಲಿದೆ ಟಿಪ್ಸ್

ಮನೆಯಲ್ಲಿರುವ ಫ್ರಿಡ್ಜ್ ಗೆ ತರಕಾರಿಯಿಂದ ಹಿಡಿದು ಮೀನು, ಮಾಂಸ ಎಲ್ಲವನ್ನೂ ತುಂಬಿಸಿಟ್ಟುಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ ಪವರ್ ಕಟ್ ಆದಾಗ ಅಥವಾ ಫ್ರಿಡ್ಜ್ ತುಂಬಾ ಗಲೀಜಾದಾಗ ಫ್ರಿಡ್ಜ್ ನೀಂದ ಒಂದು ರೀತಿಯ ವಾಸನೆ ಬರುತ್ತದೆ. ಸುಲಭವಾಗಿ ಈ ವಾಸನೆಯನ್ನು ನಿವಾರಿಸಿ ಫ್ರಿಡ್ಜ್ ಅನ್ನು ಸ್ವಚ್ಛಗೊಳಿಸುವ ವಿಧಾನ ಇಲ್ಲಿದೆ ನೋಡಿ.

ಮೊದಲು ಫ್ರಿಡ್ಜ್ ನಲ್ಲಿರುವ ವಸ್ತುಗಳನ್ನೆಲ್ಲಾ ಹೊರತೆಗೆದು ಇಡಿ. ಅದರಲ್ಲಿನ ಬಾಕ್ಸ್, ಸ್ಟ್ಯಾಂಡ್ ಗಳನ್ನು ತೊಳೆಯುವುದಕ್ಕೆ ಹಾಕಿ. ನಂತರ ಒಂದು ಬಟ್ಟೆ ತೆಗೆದುಕೊಂಡು ಫ್ರಿಡ್ಜ್ ನ ಒಳ ಭಾಗವೆಲ್ಲಾ ಚೆನ್ನಾಗಿ ಉಜ್ಜಿ. ನಂತರ ಒಂದು ಬೌಲ್ ಗೆ 2 ಟೇಬಲ್ ಸ್ಪೂನ್ ಬೇಕಿಂಗ್ ಸೋಡಾ, ಅರ್ಧ ಲಿಂಬೆಹಣ್ಣಿನ ರಸ ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ರಸ ಹಿಂಡಿದ ಲಿಂಬೆಹಣ್ಣಿನ ಸಿಪ್ಪೆಯ ಒಳಭಾಗಕ್ಕೆ ಈ ಮಿಶ್ರಣವನ್ನುಅದ್ದಿಕೊಂಡು ಇದರಿಂದ ಫ್ರಿಡ್ಜ್ ನ ಒಳಭಾಗವನ್ನು ತಿಕ್ಕಿ. ಇದರಿಂದ ವಾಸನೆಗಳೆಲ್ಲಾ ಹೋಗುತ್ತದೆ.

ನಂತರ ಉಗುರು ಬೆಚ್ಚಗಿನ ನೀರಿಗೆ ಬಟ್ಟೆ ಅದ್ದಿ ಚೆನ್ನಾಗಿ ಹಿಂಡಿ ಫ್ರಿಡ್ಜ್ ನ ಒರೆಸಿ. ನಂತರ ಒಣಗಿದ ಬಟ್ಟೆ ತೆಗದುಕೊಂಡು ಮತ್ತೊಮ್ಮೆ ಫ್ರಿಡ್ಜ್ ಅನ್ನು ಒರೆಸಿ. ಸಾಮಾನುಗಳನ್ನು ಜೋಡಿಸಿ. ತಿಂಗಳಿಗೊಮ್ಮೆ ಹೀಗೆ ಮಾಡಿದರೆ ನಿಮ್ಮ ಫ್ರಿಡ್ಜ್ ನ ವಾಸನೆ ದೂರವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...