ಫ್ರಿಜ್ ನಲ್ಲಿ ಇಡಲೇ ಬಾರದಾದ ಕೆಲವು ವಸ್ತುಗಳಿರುತ್ತವೆ. ಅವುಗಳು ಯಾವುದೆಂದು ತಿಳಿಯೋಣ.
ಟೊಮೆಟೊ ಹಣ್ಣನ್ನು ಸಾಧ್ಯವಾದಷ್ಟು ಒಣಗಿರುವ ಜಾಗದಲ್ಲಿಡಬೇಕೇ ಹೊರತು, ಫ್ರಿಜ್ ನಲ್ಲಿ ಇಡಬಾರದು. ಇದರಿಂದ ಟೊಮೆಟೊ ಬಹುಬೇಗ ಹಾಳಾಗುತ್ತದೆ.
ಬಾಳೆಹಣ್ಣು ಫ್ರಿಜ್ ನಲ್ಲಿಟ್ಟರೆ ಬಹುಬೇಗ ಕಪ್ಪಾಗುತ್ತದೆ. ಇದು ಬಿಡುಗಡೆ ಮಾಡುವ ಕೆಮಿಕಲ್ ನಿಂದ ಇದರ ಜೊತೆಗಿರುವ ಇತರ ವಸ್ತುಗಳೂ ಹಾಳಾಗುತ್ತವೆ ಹಾಗಾಗಿ ಹಣ್ಣಾದ ಬಳಿಕ ಇದನ್ನು ಫ್ರಿಜ್ ನಲ್ಲಿ ಇಡದಿರಿ.
ಸೌತೆಕಾಯಿಯನ್ನು ಫ್ರಿಜ್ ನಲ್ಲಿ ಇಡುವುದಾದರೆ ಎರಡರಿಂದ ಮೂರು ದಿನದೊಳಗೆ ತೆಗೆದು ಬಳಸಿ. ಅದಕ್ಕಿಂತ ಹೆಚ್ಚು ಇಟ್ಟರೆ ಅದು ಬಾಡಿ ನೀರಿನಂಶ ಇಲ್ಲವಾಗಿ ಒಣಗಿ ಹೋಗುತ್ತದೆ.
ಬ್ರೆಡ್ ಗೆ ಫಂಗಸ್ ಬರುತ್ತದೆ ಎಂಬ ಕಾರಣಕ್ಕೆ ಅದನ್ನು ಫ್ರಿಜ್ ನಲ್ಲಿ ಇಡದಿರಿ. ಇದು ಒಣಗಿ ರುಚಿ ಕೆಡುತ್ತದೆ. ಒಂದು ವೇಳೆ ಇಟ್ಟರೆ ಎರಡು ದಿನದೊಳಗೆ ತೆಗೆದು ಬಳಸಿ ಟೋಸ್ಟ್ ಮಾಡಿ ಸೇವಿಸಿ.
ಬೆಳ್ಳುಳ್ಳಿ – ಆಲೂಗಡ್ಡೆಯನ್ನೂ ಫ್ರಿಜ್ ನಿಂದ ದೂರವಿಡುವುದು ಒಳ್ಳೆಯದು.