alex Certify ಫ್ಯೂಚರ್​ ರಿಟೇಲ್​ ಸಿಬ್ಬಂದಿಗೆ ಬಿಗ್​ ರಿಲೀಫ್​​….! 30 ಸಾವಿರ ಮಂದಿಗೆ ಉದ್ಯೋಗ ನೀಡಲಿದೆ ರಿಲಯನ್ಸ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ಯೂಚರ್​ ರಿಟೇಲ್​ ಸಿಬ್ಬಂದಿಗೆ ಬಿಗ್​ ರಿಲೀಫ್​​….! 30 ಸಾವಿರ ಮಂದಿಗೆ ಉದ್ಯೋಗ ನೀಡಲಿದೆ ರಿಲಯನ್ಸ್​

ಫ್ಯೂಚರ್​​ ಗ್ರೂಪ್​ ಜೊತೆಯಲ್ಲಿ ರಿಲಯನ್ಸ್​ ವಿಲೀನ ಪ್ರಕ್ರಿಯೆ ಆರಂಭಿಸಿದ್ದು ಇದರಿಂದ ದೇಶದ ಪ್ರಮುಖ ರಿಟೇಲ್​ ವಹಿವಾಟು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವೆಂಡರ್​ಗಳು, ಪೂರೈಕೆದಾರರು ಹಾಗೂ ಉದ್ಯೋಗಿಗಳಿಗೆ ಭಾರೀ ನಿರಾಳವಾಗಿದೆ. ಫ್ಯೂಚರ್​​ ಗ್ರೂಪ್​ನಲ್ಲಿರುವ ಉದ್ಯೋಗಿಗಳಿಗೆ ರಿಲಯನ್ಸ್​​ ಕೆಲಸ ನೀಡಲಿದೆ. ಈ ಮೂಲಕ ಕೆಲಸ ಕಳೆದು ಕೊಳ್ಳುವ ಭೀತಿಯಲ್ಲಿದ್ದ 30 ಸಾವಿರ ಉದ್ಯೋಗಳಿಗೆ ಇದರಿಂದ ಬಿಗ್​ ರಿಲೀಫ್​ ಸಿಕ್ಕಂತಾಗಿದೆ.

ಕೇವಲ ಉದ್ಯೋಗಿಗಳು ಮಾತ್ರವಲ್ಲದೇ ಫ್ಯೂಚರ್​ ಗ್ರೂಪ್​ನಲ್ಲಿದ್ದ ವೆಂಡರ್​ಗಳು ಹಾಗೂ ಪೂರೈಕೆದಾರರಿಗೂ ದೊಡ್ಡ ಕಾರ್ಪೋರೇಟ್​ ಸಂಸ್ಥೆಯೊಂದು ನೆರವಿಗೆ ಬಂದಿರುವುದು ತಮಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ವ್ಯಾಪಾರದ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯನ್ನು ಹುಟ್ಟು ಹಾಕಿದೆ.

ಇನ್ನು ಫ್ಯೂಚರ್​ ಗ್ರೂಪ್​ ಕಳೆದ ವರ್ಷದಿಂದ ಸ್ಟೋರ್​ನ ಮಾಲೀಕರಿಗೆ ಬಾಡಿಗೆಯನ್ನು ನೀಡಿರಲಿಲ್ಲ. ಮುಂದಿನ ದಿನಗಳಲ್ಲಿ ಫ್ಯೂಚರ್​ ಗ್ರೂಪ್​ ಈ ಬಾಕಿ ಮೊತ್ತ ಪಾವತಿಸಬಹುದು ಎಂಬ ನಂಬಿಕೆ ಕೂಡ ಮಾಲೀಕರಿಗೆ ಇರಲಿಲ್ಲ. ಆದರೆ ರಿಲಯನ್ಸ್​ ಜೊತೆ ಒಪ್ಪಂದದ ಬಳಿಕ ಇವರಿಗೂ ಬಾಕಿ ಮೊತ್ತ ಪಾವತಿಯಾಗಿದ್ದು ಸ್ಟೋರ್​ ಮಾಲೀಕರು ಸಹ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...