alex Certify ಫೇಸ್​ಬುಕ್​​ನಲ್ಲಿ ಹಣ ಗಳಿಸಲು ಮುಂದಾಗಿದ್ದ ರಷ್ಯಾದ ಮಾಧ್ಯಮಗಳಿಗೆ ಬ್ರೇಕ್​ ಹಾಕಿದ ಮೆಟಾ ಸಂಸ್ಥೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೇಸ್​ಬುಕ್​​ನಲ್ಲಿ ಹಣ ಗಳಿಸಲು ಮುಂದಾಗಿದ್ದ ರಷ್ಯಾದ ಮಾಧ್ಯಮಗಳಿಗೆ ಬ್ರೇಕ್​ ಹಾಕಿದ ಮೆಟಾ ಸಂಸ್ಥೆ….!

ಉಕ್ರೇನ್​ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳ ನಡೆಯುತ್ತಿರುವ ಬೆನ್ನಲ್ಲೇ ಹಣ ಗಳಿಸಲು ಮುಂದಾಗಿರುವ ರಷ್ಯಾದ ಮಾಧ್ಯಮಗಳಿಗೆ ಫೇಸ್​ಬುಕ್​ ಮೂಗುದಾರವನ್ನು ಹಾಕಿದೆ. ಫೇಸ್​ಬುಕ್​ನ ವೇದಿಕೆಯಲ್ಲಿ ಜಾಹೀರಾತುಗಳನ್ನು ಪ್ರಕಟಿಸುವುದು ಅಥವಾ ಹಣ ಗಳಿಸುವುದನ್ನು ನಿಷೇಧಿಸಲಾಗಿದೆ ಎಂದು  ಸಾಮಾಜಿಕ ನೆಟ್​ವರ್ಕ್​ನ ಭದ್ರತಾ ನೀತಿಯ ಮುಖ್ಯಸ್ಥ ನಥಾನಿಯಲ್​ ಗ್ಲೀಚರ್​ ಹೇಳಿದ್ದಾರೆ.

ನಾವು ಈಗ ರಷ್ಯಾದ ರಾಜ್ಯ ಮಾಧ್ಯಮಗಳಿಗೆ ಪ್ರಪಚದಾದ್ಯಂತ ನಮ್ಮ ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸುವುದು ಹಣ ಗಳಿಸುವುದಕ್ಕೆ ನಿಷೇಧ ಹೇರಿದ್ದೇವೆ. ಹೆಚ್ಚುವರಿ ರಷ್ಯಾದ ಮಾಧ್ಯಮಗಳಿಗೆ ಲೇಬಲ್​ಗಳನ್ನು ಹಾಕುವುದನ್ನು ಮುಂದುವರಿಸುತ್ತೇವೆ. ಈ ಬದಲಾವಣೆಗಳು ಈಗಿನಿಂದಲೇ ಆರಂಭವಾಗಿದೆ ಎಂದು ಗ್ಲೀಚರ್ ಟ್ವಿಟರ್​ನಲ್ಲಿ ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಉಕ್ರೇನ್​ನಲ್ಲಿ ಆರಂಭಗೊಳ್ಳುತ್ತಿದ್ದ ಮಿಲಿಟರಿ ಸಂಘರ್ಷದ ಸಂಬಂಧ ಫೇಸ್​ಬುಕ್ ವಿಶೇಷ ಆಪರೇಷನ್​ ಸೆಂಟರ್​ನ್ನು ಸ್ಥಾಪಿಸಿದೆ. ಇದು ತಜ್ಞರು ಹಾಗೂ ಸಿಬ್ಬಂದಿಯನ್ನು ಹೊಂದಿದೆ. ಈ ಮೂಲಕ ಅಲ್ಲಿನ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ಹಾಗೂ ಸಾಧ್ಯವಾದಷ್ಟು ವೇಗವಾಗಿ ಕಾರ್ಯ ನಿರ್ವಹಿಸಲು ಯೋಚಿಸಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...