ಫೇಶಿಯಲ್ ಮಾಡುವ ಮುನ್ನ ಮತ್ತು ನಂತರ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಮಾಡಿಸಿದ ಫೇಶಿಯಲ್ ನೆಗೆಟಿವ್ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ವಿಷಯಗಳ ಕುರಿತು ಎಚ್ಚರಿಕೆಯಿಂದಿರಿ.
ನಿಮ್ಮ ತ್ವಚೆಗೆ ಒಪ್ಪುವ ಫೇಶಿಯಲ್ ಆಯ್ದುಕೊಳ್ಳಿ. ಬೇರೆ ಬೇರೆ ತ್ವಚೆಗೆ ತಕ್ಕಂತ ವಿವಿಧ ರೀತಿಯ ಫೇಶಿಯಲ್ ಗಳಿವೆ. ಎಣ್ಣೆ ತ್ವಚೆಯವರಿಗೆ ಒಪ್ಪುವ ಫೇಶಿಯಲ್ ಒಣ ತ್ವಚೆಯವರಿಗೆ ಒಪ್ಪುವುದಿಲ್ಲ.
ಹಾಗಾಗಿ ನಿಮ್ಮ ಬ್ಯೂಟಿಶಿಯನ್ ಬಳಿ ಸಲಹೆ ಪಡೆದು ನಿಮ್ಮ ಫೇಶಿಯಲ್ ಆಯ್ದುಕೊಳ್ಳಿ. ಜೊತೆಗೆ ನಿಮ್ಮ ತ್ವಚೆಗೆ ಪೋಷಣೆ ನೀಡುವ ಪದಾರ್ಥಗಳನ್ನು ಫೇಶಿಯಲ್ ಗೆ ಸೇರಿಸಿಕೊಳ್ಳಿ.
ಫೇಶಿಯಲ್ ಗೂ ಮುನ್ನ ವ್ಯಾಕ್ಸ್ ಅಥವಾ ಶೇವ್ ಮಾಡುವುದರಿಂದ ತ್ವಚೆ ಸೆನ್ಸಿಟಿವ್ ಆಗುತ್ತದೆ. ಫೇಶಿಯಲ್ ಮಾಡುವಾಗ ಸ್ಕ್ರಬಿಂಗ್ ಮತ್ತು ಮಸಾಜ್ ನ್ನು ಕೂಡ ಮಾಡಲಾಗುವುದರಿಂದ ತ್ವಚೆ ಸೆನ್ಸಿಟಿವ್ ಆದ್ರೆ ಹಾನಿಯುಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಫೇಶಿಯಲ್ ಗೂ ಮುನ್ನ ವ್ಯಾಕ್ಸ್ ಅಥವಾ ಶೇವ್ ಬೇಡ.
ಫೇಶಿಯಲ್ ಗೂ ಮುನ್ನ ಮೇಕಪ್ ಮಾಡುವುದನ್ನು ಅಥವಾ ಯಾವುದೇ ರೀತಿಯ ಕ್ರೀಮ್ ಹಚ್ಚುವುದನ್ನು ಮಾಡಬೇಡಿ. ಸಾಧ್ಯವಾದರೇ, ಮೈಲ್ಡ್ ಕ್ಲೆನ್ಸರ್ ನಿಂದ ಮುಖ ತೊಳೆಯಿರಿ.
ಫೇಶಿಯಲ್ ಗೆ ಹೋಗುವ ಮುನ್ನ ಮತ್ತು ಫೇಶಿಯಲ್ ನಂತರ ಸೂರ್ಯನ ಶಾಖವನ್ನು ತಾಗಿಸಬೇಡಿ. ಏಕೆಂದರೆ ಯುವಿ ರೇಡಿಯೇಶನ್ನಿಂದ ತ್ವಚೆ ಸೆನ್ಸಿಟಿವ್ ಆಗುತ್ತದೆ. ಫೇಶಿಯಲ್ ನಂತರ ಬಿಸಿಲಿಗೆ ಹೋದರೆ, ತ್ವಚೆ ಇನ್ನಷ್ಟು ಡ್ಯಾಮೇಜ್ ಆಗುವ ಸಾಧ್ಯತೆ ಹೆಚ್ಚು.