alex Certify ಫೆಬ್ರವರಿ 12ರಿಂದ ಸಾರ್ವಜನಿಕ ಪ್ರವೇಶಕ್ಕೆ ಮುಕ್ತ ಮೊಘಲ್​ ಗಾರ್ಡನ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೆಬ್ರವರಿ 12ರಿಂದ ಸಾರ್ವಜನಿಕ ಪ್ರವೇಶಕ್ಕೆ ಮುಕ್ತ ಮೊಘಲ್​ ಗಾರ್ಡನ್​

ಮೊಘಲ್ ಗಾರ್ಡನ್​​ನ್ನು ಇದೇ ಬರುವ ಶನಿವಾರದಿಂದ ಸಾರ್ವಜನಿಕರಿಗಾಗಿ ಮುಕ್ತಗೊಳಿಸಲಾಗುತ್ತದೆ ಹಾಗೂ ಮಾರ್ಚ್​ 16ರಂದು ಮುಚ್ಚಲಾಗುತ್ತದೆ ಎಂದು ರಾಷ್ಟ್ರಪತಿಭವನವು ಅಧಿಕೃತ ಹೇಳಿಕೆಯನ್ನು ನೀಡಿದೆ. ಆನ್​ಲೈನ್​ ಮುಂಗಡ ಬುಕ್ಕಿಂಗ್​ ಮಾಡಿಕೊಂಡವರಿಗೆ ಮಾತ್ರ ಗಾರ್ಡನ್​ಗೆ ಭೇಟಿ ನೀಡಲು ಅವಕಾಶ ನೀಡಲಾಗುತ್ತದೆ. ಹಿಂದಿನ ವರ್ಷದಂತೆ ಈ ವರ್ಷವೂ ಕೂಡ ಮುಂಜಾಗ್ರತಾ ಕ್ರಮದ ನಿಟ್ಟಿನಲ್ಲಿ ವಾಕ್​ ಇನ್​ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಗಾರ್ಡನ್​ ನಿರ್ವಹಣೆಯ ನಿಮಿತ್ತ ಸೋಮವಾರದಂದು ಮುಚ್ಚಲಾಗುತ್ತದೆ.

ಈ ವರ್ಷದ ಪ್ರಮುಖ ಆಕರ್ಷಣೆ ಉದ್ಯಾನೋತ್ಸವವಾಗಿದ್ದು ಫೆಬ್ರವರಿಯಲ್ಲಿ ಹಂತ ಹಂತವಾಗಿ ಅರಳುವ 11 ವಿಧದ ಟ್ಯುಲಿಪ್​ಗಳನ್ನು ಹೊಂದಿದೆ. ಭವ್ಯವಾದ ಹೂವಿನ ಕಾರ್ಪೆಟ್​ಗಳನ್ನು ಸೆಂಟ್ರಲ್​ ಲಾನಲ್ಲಿ ಪ್ರದರ್ಶಿಸಲಾಗುತ್ತದೆ. ಈ ವರ್ಷದ ಅಲಂಕಾರಿಕ ಹೂವುಗಳ ಪ್ರಮುಖ ಬಣ್ಣವು ಬಿಳಿ, ಹಳದಿ, ಕೆಂಪು ಹಾಗೂ ಕೇಸರಿಯಾಗಿದೆ.

ಪ್ರತಿ ಸ್ಲಾಟ್‌ನಲ್ಲಿ ಗರಿಷ್ಠ 100 ಜನರಿಗೆ ಅವಕಾಶವಿದೆ. ಭೇಟಿಯ ಸಮಯದಲ್ಲಿ ಸಂದರ್ಶಕರು ಮೊಬೈಲ್ ಫೋನ್‌ಗಳನ್ನು ಕೊಂಡೊಯ್ಯಬಹುದಾಗಿದೆ. ಆದರೆ ಯಾವುದೇ ನೀರಿನ ಬಾಟಲಿಗಳು, ಬ್ರೀಫ್‌ಕೇಸ್‌ಗಳು, ಕೈಚೀಲಗಳು / ಮಹಿಳಾ ಪರ್ಸ್, ಕ್ಯಾಮೆರಾಗಳು, ರೇಡಿಯೋಗಳು / ಟ್ರಾನ್ಸಿಸ್ಟರ್‌ಗಳು, ಬಾಕ್ಸ್‌ಗಳು, ಛತ್ರಿಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಮತ್ತು ತಿನ್ನಬಹುದಾದ ವಸ್ತುಗಳನ್ನು ತರದಂತೆ ವಿನಂತಿಸಲಾಗಿದೆ ಎಂದು ಪ್ರಕಟಣೆಯು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...