alex Certify ಫುಡ್ ವಿಳಂಬ ಮಾಡಿದ್ದಕ್ಕೆ​ ಸಿಬ್ಬಂದಿಗೆ ಗ್ರಾಹಕರಿಂದ ಥಳಿತ.!‌ ಶಾಕಿಂಗ್‌ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫುಡ್ ವಿಳಂಬ ಮಾಡಿದ್ದಕ್ಕೆ​ ಸಿಬ್ಬಂದಿಗೆ ಗ್ರಾಹಕರಿಂದ ಥಳಿತ.!‌ ಶಾಕಿಂಗ್‌ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಹೇಳಿದ ಸಮಯಕ್ಕೆ ಆರ್ಡರ್​ ನೀಡಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಇಬ್ಬರು ವ್ಯಕ್ತಿಗಳು ಬರ್ಗರ್​ ಕಿಂಗ್​ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆಯು ನ್ಯೂಯಾರ್ಕ್ ಸಿಟಿಯಲ್ಲಿ ನಡೆದಿದೆ. ಬರ್ಗರ್​ ಕಿಂಗ್​ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ದೃಶ್ಯಾವಳಿಗಳು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಇಬ್ಬರು ವ್ಯಕ್ತಿಗಳು ಮೊದಲು ವೇಗವಾಗಿ ಆಹಾರವನ್ನು ತಯಾರಿಸಿಲ್ಲ ಎಂದು ಬರ್ಗರ್​ ಕಿಂಗ್​ ಸಿಬ್ಬಂದಿ ಬಳಿ ದೂರನ್ನು ಹೇಳಿದ್ದಾರೆ. ಇದಾಗಿ ಕೆಲವೇ ಹೊತ್ತಿನಲ್ಲಿ ಕೌಂಟರ್​ನ ಒಳಗೆ ಜಿಗಿದ ಆ ಇಬ್ಬರು ವ್ಯಕ್ತಿಗಳು 22 ವರ್ಷ ಪ್ರಾಯದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.

ಇಬ್ಬರಲ್ಲಿ ಓರ್ವ ಬರ್ಗರ್​ ಕಿಂಗ್​ ಸಿಬ್ಬಂದಿಯನ್ನು ಹಿಡಿದುಕೊಂಡಿದ್ದರೆ ಮತ್ತೊಬ್ಬ ವ್ಯಕ್ತಿಯು ಆತನ ಮೇಲೆ ಅಟ್ಯಾಕ್​ ಮಾಡಿದ್ದನ್ನು ದೃಶ್ಯಾವಳಿಗಳಲ್ಲಿ ಕಾಣಬಹುದಾಗಿದೆ.

ಇಬ್ಬರೂ ಆರೋಪಿಗಳು ಉಳಿದ ಸಿಬ್ಬಂದಿ ಮಧ್ಯ ಪ್ರವೇಶಿಸುವವರೆಗೂ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಸಂಪೂರ್ಣ ದೃಶ್ಯಾವಳಿ ಸೆರೆಯಾಗಿದೆ. ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ನ್ಯೂಯಾರ್ಕ್​ ಪೊಲೀಸರು ಘಟನೆಯ ವಿಡಿಯೋವನ್ನು ಟ್ವಿಟರ್​ನಲ್ಲಿ ಹರಿಬಿಟ್ಟಿದ್ದಾರೆ.

— NYPD NEWS (@NYPDnews) January 4, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...