
ಇಬ್ಬರು ವ್ಯಕ್ತಿಗಳು ಮೊದಲು ವೇಗವಾಗಿ ಆಹಾರವನ್ನು ತಯಾರಿಸಿಲ್ಲ ಎಂದು ಬರ್ಗರ್ ಕಿಂಗ್ ಸಿಬ್ಬಂದಿ ಬಳಿ ದೂರನ್ನು ಹೇಳಿದ್ದಾರೆ. ಇದಾಗಿ ಕೆಲವೇ ಹೊತ್ತಿನಲ್ಲಿ ಕೌಂಟರ್ನ ಒಳಗೆ ಜಿಗಿದ ಆ ಇಬ್ಬರು ವ್ಯಕ್ತಿಗಳು 22 ವರ್ಷ ಪ್ರಾಯದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.
ಇಬ್ಬರಲ್ಲಿ ಓರ್ವ ಬರ್ಗರ್ ಕಿಂಗ್ ಸಿಬ್ಬಂದಿಯನ್ನು ಹಿಡಿದುಕೊಂಡಿದ್ದರೆ ಮತ್ತೊಬ್ಬ ವ್ಯಕ್ತಿಯು ಆತನ ಮೇಲೆ ಅಟ್ಯಾಕ್ ಮಾಡಿದ್ದನ್ನು ದೃಶ್ಯಾವಳಿಗಳಲ್ಲಿ ಕಾಣಬಹುದಾಗಿದೆ.
ಇಬ್ಬರೂ ಆರೋಪಿಗಳು ಉಳಿದ ಸಿಬ್ಬಂದಿ ಮಧ್ಯ ಪ್ರವೇಶಿಸುವವರೆಗೂ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಸಂಪೂರ್ಣ ದೃಶ್ಯಾವಳಿ ಸೆರೆಯಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ನ್ಯೂಯಾರ್ಕ್ ಪೊಲೀಸರು ಘಟನೆಯ ವಿಡಿಯೋವನ್ನು ಟ್ವಿಟರ್ನಲ್ಲಿ ಹರಿಬಿಟ್ಟಿದ್ದಾರೆ.